ಸಾವಿನ ದಿನ ಎಣಿಸುತ್ತಿರುವ ‘ಸಿದ್ದ’ , ಫಲಿಸುತ್ತಿಲ್ಲ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

Sidda-the-elephant

ಬೆಂಗಳೂರು, ಅ.30– ಮಂಚನಬೆಲೆ ಸಮೀಪ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡು ಎರಡು ತಿಂಗಳಿನಿಂದ ನರಳುತ್ತಿರುವ ಕಾಡಾನೆ ಸಿದ್ದನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪಶು ವೈದ್ಯರು ನೀಡುತ್ತಿರುವ ಯಾವುದೇ ಚಿಕಿತ್ಸೆ ಫಲಿಸಿದಂತೆ ಕಾಣುತ್ತಿಲ್ಲ. ಸರಾಗವಾಗಿ ರಕ್ತ ಚಲನೆಯಾಗಲು ಅನುಕೂಲವಾಗುವಂತೆ ಮಾಡಲು ಮಣ್ಣಿನ ದಿಬ್ಬದ ಮೇಲೆ ಕಾಡಾನೆಯನ್ನು ಮಲಗಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಅಲ್ಲಿಂದ ಸಿದ್ದ ಜಾರಿ ಕೆಳಗೆ ಬಿದ್ದಿದ್ದಾನೆ. ದೇಹದಲ್ಲಿ ಚೈತನ್ಯ ಕಳೆದುಕೊಂಡಿದ್ದಾನೆ. ದೇಹಕ್ಕೆ ಗ್ಲೂಕೋಸ್ ಮತ್ತು ಔಷಧಿಯನ್ನು ನೀಡಲಾಗುತ್ತಿದೆ.

ಆಹಾರ, ನೀರನ್ನು ಸಿದ್ದ ತೆಗೆದುಕೊಳ್ಳುತ್ತಿಲ್ಲ. ನೀರು ಮತ್ತು ಆಹಾರದ ಮೂಲಕ ದೇಹಕ್ಕೆ ಶಕ್ತಿ ಬರುವ ಸಾಧ್ಯತೆ ಇದೆ. ಆದರೆ, ಇದಾವುದನ್ನೂ ಕಾಡಾನೆ ಸ್ವೀಕರಿಸುತ್ತಿಲ್ಲ. ದೇಹದ ಆರೋಗ್ಯ ಪರಿಸ್ಥಿತಿ ಅಷ್ಟರ ಮಟ್ಟಿಗೆ ಬಿಗಡಾಯಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಂದು ಕೂಡ ಕಾಡಾನೆಯನ್ನು ಕ್ರೇನ್ ಮೂಲಕ ಎತ್ತಿ ಬೇರೆಡೆ ಸ್ಥಳಾಂತರಿಸಲಾಗಿದೆ. ಆದರೆ, ನಿರೀಕ್ಷೆಯಂತೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡ ಸಿದ್ದನಿಗೆ 52 ದಿನಗಳಾದರೂ ಚಿಕಿತ್ಸೆ ನೀಡಿರಲಿಲ್ಲ. 52 ದಿನಗಳ ನಂತರ ಚಿಕಿತ್ಸೆ ಪ್ರಾರಂಭಿಸಿದ್ದಾರೆ.

ಮುಂಚಿತವಾಗಿ ಚಿಕಿತ್ಸೆ ನೀಡಿದ್ದರೆ ಸಿದ್ದ ಚೇತರಿಸಿಕೊಳ್ಳುವ ಸಾಧ್ಯತೆ ಇತ್ತು ಎಂದು ಅಲ್ಲಿನ ಜನ ಹೇಳುತ್ತಾರೆ. ನಿನ್ನೆ ನಟ ದುನಿಯಾ ವಿಜಯ್ ಮಂಚನಬೆಲೆಗೆ ಭೇಟಿನೀಡಿ ಆನೆಯ ಆರೋಗ್ಯ ಸ್ಥಿತಿ ನೋಡಿ ಮರುಗಿದರು.

Sidda-Elephant

► Follow us on –  Facebook / Twitter  / Google+

Facebook Comments

Sri Raghav

Admin