ಸಾವಿರಾರು ಜನರನ್ನು ಸೆಳೆದ ಜೋಡಿ ಎತ್ತಿನಗಾಡಿ ಸ್ಪರ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

beluru2
ಬೇಲೂರು, ಏ.6- ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ಆಯೋಜಿಸಿದ್ದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯೂ ಗಜಲಕ್ಷ್ಮಿ ದೇವಿ ಜಾತ್ರ ಮೊಹೋತ್ಸವಕ್ಕೆ ಕಳೆ ತಂದಿತ್ತಲ್ಲದೆ, ಸ್ಪರ್ಧೆಯನ್ನು ಸಾವಿರಾರು ಜನರು ಮೊದಲ ದಿನವೆ ವೀಕ್ಷಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಶಾಸಕ ವೈ.ಎನ್.ರುದ್ರೇಶ್‍ಗೌಡ, ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಬ್ಬೀಡಿನ ಗೆಳೆಯರ ಬಳಗದ ಮತ್ತು ಗ್ರಾಮಸ್ಥರು ಮುಂದಾಗಿರುವುದು ಸಂತೋಷದ ವಿಷಯ ಎಂದರು.ಇಬ್ಬೀಡು ಗ್ರಾಮದಲ್ಲಿ ಎರಡನೆ ಬಾರಿಗೆ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಏರ್ಪಡಿಸಿರುವುದು ಜಾತ್ರ ಮೊಹೋತ್ಸವಕ್ಕೆ ಮೆರಗು ನೀಡಿದಂತಾಗಿದೆ. ಇಂತಹ ಕ್ರೀಡೆಗಳು ರೈತರ ಮೊಗದಲ್ಲಿ ಮಂದಹಾಸ ಮೂಡಿಸುವುದಲ್ಲದೆ ದಣಿದ ಜೀವಕ್ಕೆ ಮನೊಲ್ಲಾಸವನ್ನು ನೀಡಲಿದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಿಷ್ಣುಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಬರದಿಂದ ತತ್ತರಿಸಿರುವ ರೈತರ ಮುಖದಲ್ಲಿ ಸಂತೋಷ ಮೂಡಿಸುವಂತಾಗಿದೆ. ಹಾಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎತ್ತುಗಳ ಮಾಲೀಕರು ಈ ಸ್ಪರ್ದೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಯಾವುದೆ ಗೊಂದಲಗಳಿಗೂ ಅವಕಾಶ ಕೊಡದೆ ಶಾಂತಿಯುತವಾಗಿ ನಡೆಯುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕ್ರೀಡಾ ಮನೋಭಾವದೊಂದಿಗೆ ಜಾತ್ರ ಮೊಹೋತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದರು. ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಕೃಷ್ಣೇಗೌಡ, ಜೆಡಿಎಸ್ ಯುವ ಮುಖಂಡ ದಿಲೀಪ್, ಗ್ರಾಪಂ ಮಾಜಿ ಸದಸ್ಯರಾದ ರಮೇಶ್, ಐ.ಆರ್.ರಮೇಶ್, ಗ್ರಾಮಸ್ಥರಾದ ಕೃಷ್ಣ, ರಾಮಚಂದ್ರೇಗೌಡ, ವಿಜಯೇಂದ್ರ, ತಮ್ಮಣ್ಣಗೌಡ ಇನ್ನಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin