ಸಾವು ಹೀಗೂ ಬರುತ್ತಾ..? ಸೆಕ್ಸ್ ಮಾಡುತ್ತಲೇ ಸತ್ತು ಹೋದ..!

ಈ ಸುದ್ದಿಯನ್ನು ಶೇರ್ ಮಾಡಿ
Sex-01
ಹುವಾಂಗ್ ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ

ಕೀಲುಂಗ್,(ತೈವಾನ್). ಜ.31 : ಹುಟ್ಟು ಒಂದೆ ಬಗೆಯಾದರೆ ಸಾವು ಬಗೆಬಗೆಯಾಗಿ ಬರುತ್ತೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಯುವಕನೊಬ್ಬ ತನ್ನ ಗರ್ಲಫ್ರೆಂಡ್ ಜೊತೆ ಸೆಕ್ಸ್ ಮಾಡುವಾಗಲೇ ಸಾವನ್ನಪ್ಪಿದ್ದಾನೆ. ಈ ಘಟನೆ ನಡೆದದ್ದು ತೈವಾನ್ ನಲ್ಲಿ. 22 ವರ್ಷದ ಹುವಾಂಗ್ ಎಂಬ ಯುವಕ ತನ್ನ ಗರ್ಲಫ್ರೆಂಡ್ ಫು ಎಂಬುವಳ ಜೊತೆ ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ತೀವ್ರ ಹೃದಯಾಘಾತದಿಂದಾಗಿ ಆಕೆಯ ಮೇಲೆಯೇ ತನ್ನ ಪ್ರಾಣ ಬಿಟ್ಟಿದ್ದಾನೆ.

ಬೆಳಗಿನ ಜಾವದ ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದೇ ಎನ್ನ;ಲಾಗುತ್ತಿದ್ದರೂ ಈ ಪ್ರಕರಣದಲ್ಲಿ ಬೆಳಗಿನ ಜಾವ ಸೆಕ್ಸ್ ಮಾಡುತ್ತಿರುವುದೇ ಆತನ ಪ್ರಾಣಕ್ಕೆ ಮುಳುವಾಗಿದೆ. ಮೃತ ಯುವಕನ ಗರ್ಲಫ್ರೆಂಡ್ ಹೇಳಿದ ಹಾಗೆ, ಹುವಾಂಗ್ ಸೆಕ್ಸ್ ಮಾಡುವಾಗ ಅತಿಯಾಗಿ ಉದ್ರೇಕಗೊಂಡಿದ್ದ, ಅವನ ಮೈಯಿಂದ ಬೆವರು ಸುರಿಯುತ್ತಿತ್ತು. ಇದ್ದಕ್ಕಿದ್ದಂತೆ ಸಂಬೋಗ ಕ್ರಿಯೆಯನ್ನು ನಿಲ್ಲಿಸಿದ ಅವನು ನನ್ನ ಮೈಮೇಲೆಯೇ ಮಲಗಿಬಿಟ್ಟ. ಭಯಗೊಂಡ ನಾನು ಅವನನ್ನು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಕರೆದೊಯದ್ದೆ, ಆದರೆ ಅವನು ಬದುಕುಳಿಯಲಿಲ್ಲ. ಅವನ ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ ಎಂದು ಫು ಹೇಳುತ್ತಾಳೆ.

ಹುವಾಂಗ್ ದಾಖಲಾಗಿದ್ದ ಕೀಲುಂಗ್ ನಗರದ ಆಸ್ಪತ್ರೆ
ಹುವಾಂಗ್ ದಾಖಲಾಗಿದ್ದ ಕೀಲುಂಗ್ ನಗರದ ಆಸ್ಪತ್ರೆ

ಹುವಾಂಗ್ ಗೆ ಚಿಕಿತ್ಸೆ ನೀಡಿದ ಕೀಲುಂಗ್ ಆಸ್ಪತ್ರೆಯ ವೈದ್ಯ ಹೇಳುವುದೇನೆಂದರೆ, ಹುವಾಂಗ್ ನನ್ನು ಆಸ್ಪತ್ರೆಗೆ ಕರೆತಂದಾಗ ಆಗಲೇ ಅವನ ಉಸಿರು ನಿಂತಿತ್ತು. ಅವನ ಸಾವಿಗೆ ಹೃದಯಾಘಾತವೇ ಕಾರಣ. ಬೆಳಗಿನ ಜಾವ ಸುಮಾರು 5 ಗಂಟೆಗೆ 11 ಡಿಗ್ರಿ ಸೆಲ್ಸಿಯಸ್ ನಷ್ಟು ಚಳಿಯಿದ್ದು ಇದು ಕೂಡ ಹೃದಯಾಘಾತಕ್ಕೆ ಕಾರಣವಾಗಿದೆ ಎಂದರು. ಹುವಾಂಗ್ ಕೆಲ ದಿನಗಳ ಹಿಂದಷ್ಟಯೇ ಶೀತ ಮತ್ತು ಜ್ವರದಿಂದ ಬಳಲಿ ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin