ಸಾಹಿತಿ ಚಟ್ಟನಹಳ್ಳಿ ಮಹೇಶ್‍ಗೆ ಕುರುಬ ಸಮಾಜದ ವತಿಯಿಂದ ಬೀಳ್ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

kdr
ಕಡೂರು, ಮೇ 8- ಹೊರ ನಾಡಿನ ಕನ್ನಡಿಗರು ಹಾಗೂ ಬಸವಣ್ಣನವರ ಅನುಯಾಯಿಗಳು ದುಬೈನಲ್ಲಿ ಹಮ್ಮಿಕೊಂಡಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಚಟ್ಟನಹಳ್ಳಿ ಮಹೇಶ್ ಉಪನ್ಯಾಸಕರಾಗಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಕುರುಬ ಸಮಾಜದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.  ಈ ಸಂದರ್ಭದಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಸಾಹಿತಿ ಮಹೇಶ್ ಅವರು ನಮ್ಮ ಸಂಸ್ಕೃತಿ, ಧರ್ಮ, ಕನ್ನಡದ ಕಂಪನ್ನು ಸೂಸುವ ಕಾರ್ಯವನ್ನು ಹೊರ ದೇಶಗಳಲ್ಲಿ ಮಾಡುತ್ತಿರುವುದು ತಾಲೂಕಿಗೆ ಹೆಮ್ಮೆ ತರುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಅಮೇರಿಕದಲ್ಲಿ 9 ಬಾರಿ ಉಪನ್ಯಾಸ ನೀಡಿದ್ದು, ಕನ್ನಡದ ಮತ್ತು ಬಸವೇಶ್ವರರ ಬಗ್ಗೆ ಈಗ ದುಬೈನಲ್ಲಿ 5 ಕಡೆ ಉಪನ್ಯಾಸ ನೀಡುತ್ತಿದ್ದಾರೆ ಎಂದರು.ಸಾಹಿತಿ ಚಟ್ಟನಹಳ್ಳಿ ಮಹೇಶ್ ಮಾತನಾಡಿ, ಹೊರದೇಶಗಳಲ್ಲಿ ಇರುವ ಕನ್ನಡಿಗರಿಗೆ ಶಾಂತಿ, ನೆಮ್ಮದಿ ಬೇಕಿದೆ, ಅವರಿಗೆ ಹೇರಳವಾಗಿ ಹಣ ಇರಬಹುದು, ಆದರೆ ಅವರ ಮಕ್ಕಳಿಗೆ ಕನ್ನಡನಾಡಿನ ಹಾಗೂ ಬುದ್ದ, ಬಸವ, ಕನಕದಾಸರು ಸೇರಿದಂತೆ ಆನೇಕ ಮಹಾನ್ ಪುರುಷರ ಬಗ್ಗೆ ತಿಳಿದುಕೊಳ್ಳಬೇಕಿದೆ, ಅಲ್ಲಿನ ಕನ್ನಡಿಗರು ನನ್ನನ್ನು ಬಸವ ಜಯಂತಿ ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ಕರೆಸಿಕೊಂಡಿರುವುದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ ಎಂದು ಹೇಳಿದರು.  ಜಿಲ್ಲಾ ಜನಾಪದ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಕುರುಬ ಸಮಾಜದ ಕಾರ್ಯದರ್ಶಿ ಕಂಸಾಗರ ಶೇಖರಪ್ಪ, ಮುಖಂಡರಾದ ರೇವಣ್ಣ, ಗಂಗಮ್ಮರಮೇಶ್, ತೇಜ ಮಹೇಶ್, ಅವಿನಾಶ್ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin