ಸಾಹಿತಿ ಮಹಾಲಿಂಗ ಮಂಗಿ ಅವರ 10 ಗ್ರಂಥಗಳ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

6
ಮೂಡಲಗಿ,ಫೆ.11- ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಚೈತನ್ಯ ಆಶ್ರಮ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ನಾಳೆ ಬೆಳಿಗ್ಗೆ ಚೈತನ್ಯ ಶಾಲೆಯಲ್ಲಿ ಸಾಹಿತಿ ಮಹಾಲಿಂಗ ಮಂಗಿ ಅವರ 10 ಗ್ರಂಥಗಳ ಲೋಕಾರ್ಪಣೆಗೊಳ್ಳಲಿವೆ.ಸಮಾರಂಭದ ಸಾನ್ನಿಧ್ಯವನ್ನು ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಹಾಗೂ ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಗಳು ವಹಿಸುವರು.ಮಹಾಲಿಂಗಪುರದ ಡಾ. ಅಶೋಕ ನರೋಡೆ ಅಧ್ಯಕ್ಷತೆವಹಿಸುವರು. ಚೈತನ್ಯ ಸಂಸ್ಥೆಯ ಸಂಸ್ಥಾಪಕ ಸಿದ್ಧಣ್ಣ ಎಸ್. ಹೊರಟ್ಟಿ ಗ್ರಂಥಗಳ ಲೋಕಾರ್ಪಣೆ ಮಾಡುವರು.ಕೃತಿಗಳ ಕುರಿತು ಪ್ರೊ . ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಡಾ. ಮಹಾದೇವ ಜಿಡ್ಡಿಮನಿ ಮಾತನಾಡುವರು.

ಮುಖ್ಯ ಅತಿಥಿಗಳಾಗಿ ಪ್ರೊ . ಚಂದ್ರಶೇಖರ ಅಕ್ಕಿ, ಕಲ್ಲೋಳಿಯ ಬಸಗೌಡ ಪಾಟೀಲ, ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ ಭಾಗವಹಿಸುವರು ಎಂದು ಸಂಧ್ಯಾ ಪಾಟೀಲ ಹಾಗೂ ಅಶೋಕ ನೇಸರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲೋಕಾರ್ಪಣೆಗೊಳ್ಳುವ ಗ್ರಂಥಗಳು: ನನ್ನ ದೃಷ್ಟಿ ನನ್ನ ಸೃಷ್ಟಿ, ಲೇಸೆನಿಸಿಕೊಂಡು, ಮಾಧವ ಜೀವನ ದರ್ಶನ, ಸಮುಚಿತ, ಬಾಳ ಮುನ್ನಡೆಗೊಂದು ಮುನ್ನುಡಿ, ಕುಡಿ ಕಾದಂಬರಿ, ಕಾರ್ಮಿಕರ ಪುರೋಭಿವೃದ್ಧಿ, ನೆನಪಿನ ನೌಕೆಯಲಿ, ಪರಿಸರ, ಅಪ್ಪಟ ಅಪರಂಜಿಇದೇ ಸಂದರ್ಭದಲ್ಲಿ ಮಹಾಲಿಂಗ ಮಂಗಿ ಅವರು ಈ ಮುಂಚೆ ಪ್ರಕಟಗೊಂಡ ಎಲ್ಲ ಕೃತಿಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin