ಸಾಹಿತ್ಯ ಬದುಕು ಕಟ್ಟುವಲ್ಲಿ ಪ್ರಮುಖ ಪಾತ್ರ

ಈ ಸುದ್ದಿಯನ್ನು ಶೇರ್ ಮಾಡಿ

8

ಗದಗ,ಜ.25- ಕೇವಲ ಪಠ್ಯ ಹಾಗೂ ಪದವಿಗಳು ಮಾತ್ರವಲ್ಲದೆ ಸಾಹಿತ್ಯವು ಬದುಕು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಎಫ್.ಎಸ್. ದುರಗಣ್ಣವರ ತಿಳಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕುರ್ತಕೋಟಿ ಎ.ಜಿ. ಇನಾಮತಿ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗದ 2016-17 ಕವನ, ಸಣ್ಣಕತೆ, ಕಾದಂಬರಿ ರಚನೆ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪತ್ರಕರ್ತ ಹಾಗೂ ಸಾಹಿತಿ ಮಂಜುನಾಥ ಬೊಮ್ಮನಕಟ್ಟಿ ಮಾತನಾಡಿ, ಕತೆ ಕವನ ಸಣ್ಣಕತೆ ಕಾದಂಬರಿ ಗಳನ್ನು ರಚಿಸುವ ಮೊದಲು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಆರಂಭದಲ್ಲಿ ಸರಳ ಹಾಗೂ ಚುಟುಕು ಲೇಖನಗಳನ್ನು ಓದಿಕೊಳ್ಳುವ ರೂಢಿ ಮಾಡಿಕೊಳ್ಳಬೇಕು.ಬೇಂದ್ರೆ, ಸತ್ಯಕಾಮೆ, ದೇವನೂರ ಮಹಾದೇವ ಅವರನ್ನು ಇತರ ಬರಹಗಾರರನ್ನು ಪ್ರಸ್ತಾಪಿಸಿದರು.

ಡಾ. ಅರ್ಜುನ ಗೊಳಸಂಗಿ ಮಾತನಾಡಿ, ಇಂದಿನ ಮಕ್ಕಳು ದಿನದ ಅತಿ ಹೆಚ್ಚಿನ ಸಮಯವನ್ನು ಮೊಬೈಲ್ ಜೊತೆಯಲ್ಲಿ ಕಳೆಯುತ್ತಾರೆ. ಆಧುನಿಕ ಜೀವನ ಶೈಲಿಯಲ್ಲಿ ಬದುಕುವ ಬಯಕೆ ಅವರದು. ಇದರಿಂದ ಹೊರಬಂದು ಸಾಹಿತ್ಯ ದಂತಹ ವಿಷಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಹಾಗೂ ಮೌಲ್ಯಯುತ ಜೀವನವನ್ನು ಅಳವಡಿಸಿಕೊಳಲು ಸಾಧ್ಯ.ಅಂಬೇಡ್ಕರ್ ರಂತಹ ಶ್ರೇಷ್ಠ ವ್ಯಕ್ತಿಯನ್ನು ಇಂದು ವಿಶ್ವವು ಗುರುತಿಸುತ್ತದೆಯೆಂದರೆ ಅದಕ್ಕೆ ಕಾರಣ ಅವರ ಅಗಾಧವಾದ ಜ್ಞಾನ ಆ ಜ್ಞಾನದ ಸಂಪತ್ತು ದೊರಕಿದ್ದು ಪುಸ್ತಕಗಳಿಂದ ಎಂದು ಅಭಿಪ್ರಾಯಪಟ್ಟರು.ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಎಸ್.ಎಂ. ವಿಭೂತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಪ್ರೊ  ಎಂದರು.ಶೈನಾಜ ಕಟ್ಟಿಮನಿ ಅವರು ಮಾತನಾಡಿ ಉತ್ಕೃಷ್ಟ ಪುಸ್ತಕಗಳನ್ನು ಅಭ್ಯಾಸ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin