ಸಿಇಟಿ ಎಡವಟ್ಟಿನಿಂದ ವಿದ್ಯಾರ್ಥಿಗಳು-ಪೋಷಕರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Students--01

ಬೆಂಗಳೂರು, ಆ.26- ಸಿಇಟಿ ಎಡವಟ್ಟಿನಿಂದ ಸಾವಿರಾರು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಖಾಲಿ ಉಳಿದಿರುವ ಸಾವಿರಕ್ಕೂ ಹೆಚ್ಚು ಸೀಟುಗಳಿಗೆ ಇಂದು ಮತ್ತು ನಾಳೆಯೊಳಗೆ ಡಿಡಿ ತರಬೇಕು. ಇಲ್ಲದಿದ್ದರೆ ಅವುಗಳನ್ನು ಖಾಸಗಿ ಸೀಟುಗಳಾಗಿ ಪರಿವರ್ತಿಸುತ್ತೇವೆ ಎಂಬ ಅವೈಜ್ಞಾನಿಕ ಮಾಹಿತಿಯನ್ನು ಸಿಇಟಿ ರವಾನಿಸಿ ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಿರುವುದು ತಿಳಿದುಬಂದಿದೆ. ವಿವಿಧ ಹಂತಗಳಲ್ಲಿ ಕೌನ್ಸುಲಿಂಗ್ ನಡೆಸುವ ಸಿಇಟಿ ವೈದ್ಯಕೀಯ ಸೀಟುಗಳು ಖಾಲಿ ಉಳಿದಾಗ ಅವುಗಳನ್ನು ಹಂತ ಹಂತವಾಗಿ ಅರ್ಹತೆ ಇರುವ ಹಿಂದಿನವರಿಗೆ ಕೊಡಬೇಕು. ಆದರೆ, ಏಕಾಏಕಿ ಎರಡು ದಿನಗಳೊಳಗೆ ಡಿಡಿ ತಂದು ಪ್ರವೇಶ ಪಡೆಯಬೇಕು ಎಂದು ಹೇಳಿ ಎಡವಟ್ಟು ಮಾಡಿದೆ. ಮೇಲಾಗಿ ಇಂದು ಮತ್ತು ನಾಳೆ ಬ್ಯಾಂಕ್‍ಗಳ ರಜೆ ಇದೆ.

ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಅಡ್ಮಿಷನ್‍ಗೆ ಡಿಡಿಯನ್ನು ಎಲ್ಲಿಂದ ತರುವುದು, ಸಿಇಟಿ ಡಿಡಿ ತಂದರೆ ಮಾತ್ರ ಅಡ್ಮಿಷನ್, ಇಲ್ಲದಿದ್ದರೆ ಅಡ್ಮಿಷನ್ ಇಲ್ಲ ಎಂದು ಹೇಳಿದೆ.  ರಜೆ ಇದ್ದರೂ ಇಂತಹ ಅವೈಜ್ಞಾನಿಕ ಆದೇಶ ಹೊರಡಿಸಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸೀಟು ಎಲ್ಲಿ ಕೈ ತಪ್ಪುತ್ತದೋ ಎಂದು ಕಂಗಾಲಾಗಿದ್ದಾರೆಯಲ್ಲದೆ ಸಿಇಟಿಯತ್ತ ದಾವಿಸಿದ್ದಾರೆ. ಬ್ಯಾಂಕ್ ತೆರೆಯುವವರೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಖಾಸಗಿಯವರೊಂದಿಗೆ ಕೈಜೋಡಿಸಿ ದುರುದ್ದೇಶಪೂರ್ವಕವಾಗಿ ಸಿಇಟಿ ಈ ಎಡವಟ್ಟನ್ನು ಮಾಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಇಂತಹ ಕೃತ್ಯಗಳನ್ನು ಮಾಡುತ್ತಾರೆ. ಇದರಿಂದ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಕೂಡಲೇ ಇದನ್ನು ಸರಿಪಡಿಸಿಬೇಕು, ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

Facebook Comments

Sri Raghav

Admin