ಸಿಎಂಗೆ ಹಳೆ ಚೆಕ್ ನೀಡಿ ಮುಜುಗುರಕ್ಕೊಳಗಾದ ಸಚಿವ ಎ.ಮಂಜು

ಈ ಸುದ್ದಿಯನ್ನು ಶೇರ್ ಮಾಡಿ

CM-0001

ಬೆಂಗಳೂರು, ಅ.19-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಿಫ್ಟ್ ಕೊಡಲು ಹೋಗಿ ಮುಜುಗರಕ್ಕೀಡಾದ ಪಶುಸಂಗೋಪನಾ ಸಚಿವ ಎ.ಮಂಜು ಅವರು ಆಗಷ್ಟ್ ನಲ್ಲಿ ನೀಡಿದ್ದ ಚೆಕ್ಕನ್ನು ಮತ್ತೊಮ್ಮೆ ಸಿಎಂಗೆ ನೀಡಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಚೆಕ್ಕನ್ನು ಪರಿಶೀಲಿಸದೆ ಮುಖ್ಯಮಂತ್ರಿಗಳು ಅರೆಕ್ಷಣ ಅವಕ್ಕಾದರು. ಚೆಕ್‍ನಲ್ಲಿ ನಮೂದಿಸಲಾಗಿದ್ದ ದಿನಾಂಕವನ್ನು ಗಮನಿಸಿದ ಮುಖ್ಯಮಂತ್ರಿಗಳು ಈ ಚೆಕ್ಕನ್ನು ಒಮ್ಮೆ ಪರಿಶೀಲಿಸಿದ್ದೀರಾ ಎಂದು ಮಂಜು ಅವರನ್ನು ಪ್ರಶ್ನಿಸಿದಾಗಲೇ ಅವರಿಗೆ ಈ ಚೆಕ್ ತಾನೇ ವಿತರಿಸಿದ್ದ ಚೆಕ್ ಎಂಬುದು ಅರಿವಿಗೆ ಬಂದಿದೆ
ಈ ಎಡವಟ್ಟಿನಿಂದ ಮಂಜು ಅವರು ಕೂಡ ಮುಜುಗರಕ್ಕೆ ಒಳಗಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin