ಸಿಎಂ ಕುಮಾರಸ್ವಾಮಿ-ಸ್ಪೀಕರ್ ರಮೇಶ್‍ಕುಮಾರ್’ರ ಈ ವಿಷಯ ಕಾಕತಾಳೀಯದಂತಿದೆ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--Spek
ಬೆಂಗಳೂರು, ಮೇ 25-ಕುಮಾರಸ್ವಾಮಿಯವರು ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಅವಧಿಯಲ್ಲೇ ರಮೇಶ್‍ಕುಮಾರ್ ಅವರು ಎರಡನೇ ಅವಧಿಗೆ ಸ್ಪೀಕರ್ ಆಗಿ ಆಯ್ಕೆಯಾಗಿರುವ ಕಾಕತಾಳೀಯ ಘಟನೆ ನಡೆದಿದೆ. ಕುಮಾರಸ್ವಾಮಿ 2006ರಲ್ಲಿ ಬಿಜೆಪಿ ಅವರ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೊಂದು ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಮೈತ್ರಿ ಪಕ್ಷ ಕಾಂಗ್ರೆಸ್ ಆಗಿದೆ.

ರಮೇಶ್‍ಕುಮಾರ್ ಅವರು 1994 ರಿಂದ 1999ರ ನಡುವೆ ಸ್ಪೀಕರ್ ಆಗಿ ಕೆಲಸ ಮಾಡಿದ್ದರು. ಎರಡನೇ ಅವಧಿಗೆ ಖಾಯಂ ಸ್ಪೀಕರ್ ಆಗಿ ಯಾರೂ ಕೆಲಸ ಮಾಡಿರುವ ಉದಾಹರಣೆ ಇಲ್ಲ.ಇಂತಹ ಅವಕಾಶ ರಮೇಶ್‍ಕುಮಾರ್ ಅವರ ಪಾಲಿಗೆ ಸಂದಿದೆ.24 ವರ್ಷಗಳ ನಂತರ ರಮೇಶ್‍ಕುಮಾರ್ ಮತ್ತೆ ಸ್ಪೀಕರ್ ಆಗುತ್ತಿದ್ದರೆ, 11 ವರ್ಷಗಳ ನಂತರ ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ.

Facebook Comments

Sri Raghav

Admin