ಸಿಎಂ ದುಬಾರಿ ವಾಚ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

Siddu-Watch

ಬೆಂಗಳೂರು, ಜು.31-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ವಾಚ್ ಉಡುಗೊರೆ ಹಿಂದೆ ಭ್ರಷ್ಟಾಚಾರ ನಡೆದಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ 70 ಲಕ್ಷ ಮೌಲ್ಯದ ಹೂಬ್ಲೇಟೋ ವಾಚನ್ನು ಉಡುಗೊರೆ ನೀಡಿದ ಗಿರೀಶ್ ಚಂದ್ರ ವರ್ಮಾ ದುಬೈನಲ್ಲಿ ಕೆಲಸ ಮಾಡುತ್ತಿರುವ ಎನ್‍ಎಂಸಿ ಆಸ್ಪತ್ರೆಗೆ ಉಡುಪಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ವಹಣೆ ಗುತ್ತಿಗೆ ನೀಡಲಾಗಿದೆ. ಜೊತೆಗೆ ಜೋಗ್‍ಫಾಲ್ಸ್‍ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯನ್ನು ಗುತ್ತಿಗೆ ನೀಡಲಾಗಿದೆ.

ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯುವ ಈ ಎರಡೂ ಯೋಜನೆಗಳಿಂದ ಸುಮಾರು 400 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡÉದಿದೆ. ಹೀಗಾಗಿ ಗಿರೀಶ್‍ಚಂದ್ರವರ್ಮಾ ನೀಡಿರುವ ದುಬಾರಿ ಬೆಲೆಯ ವಾಚ್ ಪ್ರಕರಣ ಭ್ರಷ್ಟಾಚಾರ ವ್ಯಾಪ್ತಿಗೆ ಒಳಪಡಲಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ತಾವು ಪಡೆದ ವಾಚ್‍ನಿಂದ ವಿವಾದ ತೀವ್ರ ಸ್ವರೂಪ ತಲುಪಿದಾಗ ಸಿದ್ದರಾಮಯ್ಯ ಅವರು ಆಗಿನ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮುಖಾಂತರ ಸಚಿವ ಸಂಪುಟ ಸಭಾಂಗಣದಲ್ಲಿ ವಾಚನ್ನು ಇರಿಸಿದ್ದಾರೆ. ಈವರೆಗೂ ಸಿವಿಲ್ ಮೊಕದ್ದಮೆಯಾಗಿತ್ತು, ಇನ್ನು ಮೇಲೆ ಕ್ರಿಮಿನಲ್ ಮೊಕದ್ದಮೆ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು…!

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin