ಸಿಎಂ ಭಾಷಣದ ವೇಳೆ ‘ನ್ಯಾಯ ಕೊಡಿಸಿ’ ಎಂದು ಕೂಗಿದ ವ್ಯಕ್ತಿ ಪೊಲೀಸರ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiha-001

ಬೆಂಗಳೂರು,ನ.1-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ರಾಜ್ಯೋತ್ಸವ ವೇಳೆ ಭಾಷಣ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ, ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅನ್ಯಾಯವಾಗಿದೆ. ನನಗೆ ನ್ಯಾಯ ಕೊಡಿಸಿ ಎಂದು ಘೋಷಣೆ ಕೂಗಿದ ಘಟನೆ ಇಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರಿಗೆ ಏನು ಅನ್ಯಾಯವಾಗಿದೆ ಕೇಳಿ, ಅದನ್ನು ಸರಿಪಡಿಸಿ ನ್ಯಾಯ ಕೊಡಿಸೋಣ ಎಂದು ಹೇಳಿದರು. ಆ ವೇಳೆಗೆ ಪೊಲೀಸರು ಬಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಕಬ್ಬನ್ ಪಾರ್ಕ್ ಠಾಣೆಯತ್ತ ಕರೆದೊಯ್ದರು.
ವಿವಿರ:
ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ನಿವಾಸಿ ಪರಶುರಾಮ್ 1993ರಲ್ಲಿ ಕೆಎಎಸ್ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಬೇರೆ ಭಾಷೆಯಲ್ಲಿ ಇತ್ತು. ಇವರು ಕನ್ನಡದಲ್ಲಿ ಉತ್ತರ ಬರೆದಿದ್ದರು. ಹಾಗಾಗಿ ಅನುತ್ತೀರ್ಣರಾಗಿದ್ದರು. ಅಂದಿನಿಂದಲೂ ಪರಶುರಾಮ್ ಹೋರಾಟ ನಡೆಸುತ್ತಲೇ ಇದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಸಾವಿರಾರು ಮಂದಿ ನೆರೆದಿದ್ದ ಸಭಾಂಗಣದಲ್ಲಿ ಮುಖ್ಯಮಂತ್ರಿ ಭಾಷಣದ ಮಧ್ಯೆಯೇ ಪರಶುರಾಮ್ ನ್ಯಾಯಬೇಕು ಎಂದು ಕೂಗುತ್ತಾ ವೇದಿಕೆ ಸಮೀಪ ಬಂದಾಗ ಕಾರ್ಯಕ್ರಮದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾವಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin