ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಶಾಸಕ ಎಂ.ಪಿ.ರವೀಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

CM-Raveendra

ಬೆಂಗಳೂರು,ಫೆ.3-ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಸಕ ಎಂ.ಪಿ.ರವೀಂದ್ರ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಿನ್ನೆ ಕೆಎಂಎಫ್ ನಿರ್ದೇಶಕರ ಜೊತೆ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಹೋಗಿದ್ದ ರವೀಂದ್ರ ಅವರು, ಹಾಲಿ ಅಧ್ಯಕ್ಷ ನಾಗರಾಜ್ ಅವರಿಗೆ ತಿಳುವಳಿಕೆ ನೀಡಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಬೇಕೆಂದು ಕೋರಿದ್ದರು.  ಇಂದು ಬೆಳಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನಾಗರಾಜ್ ಅವರ ವಿರುದ್ದ ದೂರು ನೀಡಿದ್ದಾರೆ. ಎರಡೂವರೆ ವರ್ಷದ ನಂತರ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಚುನಾವಣೆ ಅವಧಿಯಲ್ಲಿ ಭರವಸೆ ನೀಡಿದ್ದಾರೆ. ಆದರೆ ಅಧಿಕಾರ ಅವಧಿ ಮುಗಿದರೂ ಸ್ಥಾನ ಬಿಟ್ಟುಕೊಟ್ಟಿಲ್ಲ ಎಂದು ದೂರಿದ್ದಾರೆ.

ಅಧಿಕಾರ ಶಾಶ್ವತ ಅಲ್ಲ ಎಂಬುದು ನಾಗರಾಜ್ ಅರ್ಥ ಮಾಡಿಕೊಳ್ಳಬೇಕು. ಅವರ ಅಧಿಕಾರ ಅವಧಿ ಮುಗಿದರೂ ಕೂಡ ಇನ್ನು ಹುದ್ದೆ ಬಿಟ್ಟುಕೊಟ್ಟಿಲ್ಲ. ಮಾರ್ಚ್‍ನಲ್ಲಿ ಬಜೆಟ್ ಮಂಡಿಸುವುದಾಗಿ ಹೇಳುತ್ತಿದ್ದಾರೆ. ಬಜೆಟ್‍ಗೆ ಅಷ್ಟು ಒತ್ತು ಕೊಡುವ ಅವಶ್ಯಕತೆ ಇಲ್ಲ. ಪ್ರತಿ ವರ್ಷದಂತೆ ಈ ವರ್ಷವು ಬಜೆಟ್ ನಡೆಯಲಿದೆ.  ನಾಗರಾಜ್ ಅವರೇ ನಿರ್ದೇಶಕರ ಮುಂದೆ ಬಜೆಟ್ ಮಂಡನೆ ಮಾಡಿದರು ಕೂಡ ಅದರಲ್ಲಿ ಅವರ ಪಾಲು ಇರುತ್ತದೆ. ಕೆಎಂಎಫ್‍ನಿಂದ 10 ಲಕ್ಷ ಖರ್ಚು ಮಾಡಿ ದುಬೈನಲ್ಲಿ ನಡೆಯುತ್ತಿರುವ ಕೆಂಪೇಗೌಡ ಜನ್ಮ ದಿನಾಚರಣೆಗೆ ನಾಗರಾಜು ಹಾಗೂ ಕೆಎಂಎಫ್‍ನ ಇತರೆ ನಿರ್ದೇಶಕರು ತೆರಳುತ್ತಿದ್ದು , ಫೆ.9ರಂದು ವಾಪಸ್ ಬಂದ ನಂತರ ನಿರ್ದೇಶಕರ ಸಭೆ ನಡೆಸಿ ಅವರ ಮನವೊಲಿಸುವುದಾಗಿ ಭರವಸೆ ನೀಡಿದರು.

ಇದುವರೆಗೂ ನಾಗರಾಜ್ ವಿರುದ್ದ ಅವಿಶ್ವಾಸ ನಿಲುವಳಿ ಮಂಡಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಕಾನೂನು ಪರಿಶೀಲಿಸುವುದಾಗಿ ಹೇಳಿದ್ದಾರೆ. ನಾಗರಾಜ್ ಅವರು ಪಕ್ಷದ ವರಿಷ್ಠರ ಮಾತಿಗೆ ಬೆಲೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.   ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ಜವಾಬ್ದಾರಿ ತೆಗೆದುಕೊಂಡು ಶೀಘ್ರದಲ್ಲೇ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin