ಸಿಎಂ ಸಿದ್ದರಾಮಯ್ಯ ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ : ಮುರಳಿಧರ್ ರಾವ್

ಈ ಸುದ್ದಿಯನ್ನು ಶೇರ್ ಮಾಡಿ

cm-bjp
ಬೆಂಗಳೂರು, ಅ.22-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಡೆದು ಆಳುವ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ತಿಳಿಸಿದರು. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಲವು ವಿಚಾರಗಳಲ್ಲಿ ವಿಫಲವಾಗಿದ್ದು , ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಕಮಿಷನ್ ಪಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಆರೋಪಿಸಿದರು. ನವಪರಿವರ್ತನಾ ಯಾತ್ರೆಗೆ ಇಂದು ಭೂಮಿ ಪೂಜೆ ಮಾಡಿದ್ದೇವೆ. ಇದು ರಾಜ್ಯದಲ್ಲಿ ಸರ್ಕಾರ ಬದಲಾವಣೆ ಮಾಡುವ ಕಾರ್ಯಕ್ರಮವಾಗಲಿದೆ. ಹೊಸ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಗತವಾಗಲಿದೆ. ನಾವು ಯಾವುದೇ ಒಂದು ವರ್ಗ ಮತ್ತು ಜಾತಿ ಪರ ಅಲ್ಲ ಎಂದು ಸ್ಪಷ್ಟಪಡಿಸಿದರು. ರೈತರ ಆತ್ಮಹತ್ಯೆ ತಡೆಯುವುದಷ್ಟೇ ಅಲ್ಲ . ರೈತರು ಸ್ವಂತ ಕಾಲಿನ ಮೇಲೆ ನಿಲ್ಲುವ ರೀತಿ ಕೆಲಸ ಮಾಡುತ್ತೇವೆ ಎಂದ ಅವರು, ಪರಿವರ್ತನೆ ಮಾಡುವುದು ಎಂದರೆ ಪ್ಯಾಚ್ ವರ್ಕ್ ಅಲ್ಲ. ಅದು ಕರ್ನಾಟಕದ ಸಂಪೂರ್ಣ ಬದಲಾವಣೆ ಉದ್ದೇಶ ಹೊಂದಿದೆ ಎಂದರು.

ಹೊಸದೊಂದು ರಾಜಕಾರಣ ಪರ್ವ ನಿರ್ಮಿಸಲು ಮುಂದಾಗಿದ್ದು , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪರಿವರ್ತನಾ ರ್ಯಾಲಿಗೆ ಚಾಲನೆ ನೀಡಲಿದ್ದೇವೆ. ಪ್ರತಿ ಬೂತ್‍ಗೆ ಮೂರು ಬೈಕ್‍ನಂತೆ 6 ಜನರು ಬರುವಂತೆ ತಿಳಿಸಲಾಗಿದೆ. ಗರಿಷ್ಠ ಎಷ್ಟು ಮಂದಿ ಬೇಕಾದರೂ ರ್ಯಾಲಿಗೆ ಬರಬಹುದಾಗಿದೆ. ಇಂಥದೊಂದು ಕಾರ್ಯಕ್ರಮ ದೇಶದ ಯಾವುದೇ ಭಾಗದಲ್ಲಿ ಮಾಡಿಲ್ಲ. ನ.2ರಂದು ರ್ಯಾಲಿ ಆರಂಭವಾಗಲಿದೆ. 3 ಲಕ್ಷಕ್ಕಿಂತ ಹೆಚ್ಚು ಮಂದಿ ಸಮಾವೇಶಗೊಳ್ಳುವ ನಿರೀಕ್ಷೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಅತ್ಯಂತ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯುವುದು, ನವಕರ್ನಾಟಕ ನಿರ್ಮಿಸುವುದು ರ್ಯಾಲಿಯ ಉದ್ದೇಶವಾಗಿದ್ದು , ಕಾಂಗ್ರೆಸ್ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು. ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಪ್ರತಿದಿನವೂ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಹಗರಣವನ್ನು ಬಯಲು ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸವಾಲು ಹಾಕುತ್ತೇವೆ. ಇನ್ನು ಚರ್ಚೆ ಏನಿದ್ದರೂ ಸುದ್ದಿ ವಾಹಿನಿಗಳ ಬದಲಾಗಿ ಬೀದಿಯಲ್ಲಿ ಮಾತ್ರ ಮಾಡುತ್ತೇವೆ ಎಂದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ 75 ದಿನ ಪರಿವರ್ತನಾ ಯಾತ್ರೆ ನಡೆಯಲಿದೆ. ಅಭಿವೃದ್ದಿ ವಿರೋಧಿಯಾಗಿರುವ ರಾಜ್ಯ ಸರ್ಕಾರ ಕೋಮು ದ್ವೇಷ ಬಿತ್ತಿ ಜಾತಿ ಜಾತಿ ನಡುವೆ ಸಂಘರ್ಷ ಬಿತ್ತುತ್ತಿದೆ ಎಂದು ಆರೋಪಿಸಿದರು.

Facebook Comments

Sri Raghav

Admin