ಸಿಕ್ಕಿಂ ಗಡಿ ಬಿಕ್ಕಟ್ಟು ತಾತ್ಕಾಲಿಕ ಶಮನ, ಹಿಂದೆ ಸರಿದ ಚೀನಾ ಸೇನೆ

ಈ ಸುದ್ದಿಯನ್ನು ಶೇರ್ ಮಾಡಿ

Idnia-Pakista-d

ನವದೆಹಲಿ/ಬೀಜಿಂಗ್, ಜು.3-ಭಾರತ-ಚೀನಾ ಗಡಿ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ಉಲ್ಬಣಗೊಂಡಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿದೆ. ಸಿಕ್ಕಿಂ ವಲಯದಲ್ಲಿ ತನ್ನ ಸೇನೆಯನ್ನು ಚೀನಾ ಹಿಂದಕ್ಕೆ ಕರೆಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಬಿಗುವಿನ ವಾತಾವರಣ ಮತ್ತು ಯುದ್ಧದ ಕಾರ್ಮೋಡ ತಿಳಿಗೊಂಡಂತಾಗಿದೆ.  ಚೀನಾ ಸೈನಿಕರ ಜೊತೆ ಸಂಘರ್ಷ ನಡೆಯುತ್ತಿರುವ ಈಶಾನ್ಯ ಭಾರತದ ಸಿಕ್ಕಿಂ ಗಡಿಗೆ ಭಾರತ ಮತ್ತಷ್ಟು ಯೋಧರನ್ನು ನಿಯೋಜಿಸಿತ್ತು. ಇದರಿಂದಾಗಿ ಉಭಯ ದೇಶಗಳಲ್ಲಿ ಸಮರದ ಭೀತಿಯ ಆತಂಕದ ಛಾಯೆ ಕವಿದಿತ್ತು. ಈಗ ಚೀನಾ ಸೇನೆ ರಾಜಿ ಸೂತ್ರವೊಂದಕ್ಕೆ ಮುಂದಾಗಿ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಯೋಧರನ್ನು ವಾಪಸ್ ಕರೆಸಿಕೊಳ್ಳುವಂತೆ ಆಗ್ರಹಿಸಿರುವುದರಿಂದ ಗಡಿ ಬಿಕ್ಕಟ್ಟು ತಾತ್ಕಾಲಿಕವಾಗಿ ಬಗೆಹರಿದಂತಾಗಿದೆ.

ಸಿಕ್ಕಿಂನ ಡೋ ಕಾಲ, ಡಾಂಗ್‍ಲಂಗ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಡಿ ಕಾವಲಿಗೆ ನಿಂತು ಗಸ್ತು ತಿರುಗುವ ತನ್ನ ಸೇನಾ ಪಡೆಗೆ ಬೆಂಬಲ ನೀಡಲು ಭಾರತವು ಮತ್ತಷ್ಟು ಯೋಧರನ್ನು ನಿಯೋಜಿಸಿತ್ತು. 1962ರ ಇಂಡೋ-ಚೀನಾ ಯುದ್ಧ ಮತ್ತೆ ಮರುಕಳಿಸುವ ಆತಂಕವ ವಾತಾವರಣ ಭುಗಿಲೆದ್ದಿತ್ತು. ಚೀನಾ ಈಗ ಒಂದು ಹೆಜ್ಜೆ ಹಿಂದೆ ಸರಿದು ತನ್ನ ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿದ್ದು ಪ್ರಕ್ಷುಬ್ಧ ಪರಿಸ್ಥಿತಿ ತಿಳಿಗೊಂಡಂತಾಗಿದೆ.

ಸಿಕ್ಕಿಂ ವಲಯದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಡೋ ಕಾಲದಲ್ಲಿ ಭಾರತ ಮತು ಚೀನಾದ ಸೈನಿಕರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧರಾಗಿದ್ದರಿಂದ ಸಮರ ಸದೃಶ ಪರಿಸ್ಥಿತಿ ಅಲ್ಲಿ ನೆಲೆಗೊಂಡಿತ್ತು. ಇದು ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಮತ್ತು ವಿವಾದ ಇತ್ಯರ್ಥ ಮಾತುಕತೆಗ ಅಡ್ಡಿ ಉಂಟಾಗುವ ಹಿನ್ನೆಲೆಯಲ್ಲಿ ಚೀನಾ ಮುಂದಾಲೋಚನೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ.   ಡೋ ಕಾಲ ಪ್ರದೇಶದಲ್ಲಿ ಚೀನಾ ಕಾನೂನು ಬಾಹಿರವಾಗಿ ರಸ್ತೆ ನಿರ್ಮಿಸುತ್ತಿರುವುದು ಭಾರತದ ಯೋಧರನ್ನು ಕೆರಳಿಸಿತ್ತು. ಬಿಕ್ಕಟ್ಟು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin