ಸಿಕ್ಕಿಬಿದ್ದ ಬಾಂಬ್ ನಾಗನ ಬಲಗೈ ಭಂಟ ಪೆರಿಯಾರ್ ಅಪ್ಪು

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು, ಮೇ 9 – ತಲೆ ಮರೆಸಿಕೊಂಡಿರುವ ಪಾಲಿಕೆ ಮಾಜಿ ಸದಸ್ಯ ನಾಗರಾಜನ ಹುಡುಕಾಟದ ನಡುವೆಯೇ ಆತನ ಬಲಗೈ ಭಂಟ ಸಿಕ್ಕಿ ಬಿದ್ದಿದ್ದಾನೆ. ಎಸಿಪಿ ಕೆ.ವಿ.ರವಿಕುಮಾರ್ ಅವರ ತಂಡದ ಕಾರ್ಯಾಚರಣೆ ವೇಳೆ ಸೌಂದರ್ ರಾಜನ್ ಅಲಿಯಾಸ್ ಪೆರಿಯಾರ್ ಅಪ್ಪು (31) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ನಾಗರಾಜನ ಕೆಲವು ಅಕ್ರಮ ದಂಧೆಗಳಿಗೆ ಈತ ಸಾಥ್ ನೀಡಿದ್ದ. ಇದಲ್ಲದೆ, ಇತ್ತೀಚೆಗೆ ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಈತನ ಪಾತ್ರ ಪ್ರಮುಖವಾಗಿದ್ದು, ಅಪಹರಣ ಸೇರಿದಂತೆ ಹಲವು ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಏ.14ರಂದು ಪೊಲೀಸರು ದಾಳಿ ನಡೆಸಿದಾಗ ನಾಗರಾಜ ಸೇರಿದಂತೆ ಆತನ ಸಹಚರರು ಭೂಗತಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ನಡುವೆ ಸುಮಾರು 19 ಮಂದಿ ಸಿಕ್ಕಿಬಿದ್ದಿದ್ದರು. ಆದರೆ ಪೆರಿಯಾರ್ ಅಪ್ಪು ಮಾತ್ರ ಸಿಕ್ಕಿರಲಿಲ್ಲ. ನಿನ್ನೆಯಷ್ಟೆ ನಾಗರಾಜ ಶರಣಾಗತಿ ಬಗ್ಗೆ ಸಿಡಿ ಕಳುಹಿಸಿದ್ದ ವಿಷಯ ತಿಳಿದ ತಕ್ಷಣ ಎಚ್ಚೆತ್ತ ಪೊಲೀಸರು ಇದನ್ನು ತಂದುಕೊಟ್ಟಿದ್ದು ಯಾರು ಎಂಬುದರ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದಾಗ ಈ ಐನಾತಿ ನಾಗನ ಭಂಟ ಅಪ್ಪು ಸೆರೆ ಸಿಕ್ಕಿದ್ದಾನೆ ಎಂದು ಹೇಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin