ಸಿಕ್ಸರ್ ಸರದಾರ ಯುವಿ ಜಮಾನ ಮುಗಿಯಿತೇ..?

ಈ ಸುದ್ದಿಯನ್ನು ಶೇರ್ ಮಾಡಿ

Yuvaj-Singh

ಮುಂಬೈ, ನ.4- ಸಿಕ್ಸರ್‍ಗಳ ಸರದಾರ ಯುವರಾಜ್‍ಸಿಂಗ್‍ರ ಕ್ರಿಕೆಟ್ ಜೀವನ ಕೊನೆಗೊಂಡಿತೇ ಎಂಬ ಅನುಮಾನಗಳು ಆವರಿಸಿವೆ…. ಇದಕ್ಕೆ ಇಂಬು ಕೊಡುವಂತೆ ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಯುವಿಗೆ ಸ್ಥಾನ ದೊರೆಯದಿರುವುದು ಸಾಕ್ಷಿ.ಭಾರತದ ಆರಂಭಿಕ ಆಟಗಾರರಾದ ರೋಹಿತ್‍ಶರ್ಮಾ, ಶಿಖರ್‍ಧವನ್, ಲೋಕೇಶ್‍ರಾಹುಲ್‍ರ ಗಾಯದ ಸಮಸ್ಯೆಯ ನಡುವೆ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಯುವರಾಜ್‍ಸಿಂಗ್‍ಗೆ ಸ್ಥಾನ ಸಿಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಆ ಸ್ಥಾನದಲ್ಲಿ ಯುವ ಆಟಗಾರ ಹಾರ್ದಿಕ್ ಪಾಂಡ್ಯಾಗೆ ಅವಕಾಶ ಕಲ್ಪಿಸಿದ್ದೇ ಅಲ್ಲದೆ ಅನುಭವಿ ಆಟಗಾರ ಗೌತಮ್‍ಗಂಭೀರ್‍ಗೆ ಮಣೆ ಹಾಕಲಾಗಿದೆ.ಒಂದು ಅಂದಾಜಿನ ಪ್ರಕಾರ ಯುವರಾಜ್‍ಸಿಂಗ್ ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಸಿಗದಿರಲು ಈ ಮೂರು ಪ್ರಮುಖ ಅಂಶಗಳೇ ಕಾರಣವೆಂದೂ ಹೇಳಬಹುದು.

ಮಧ್ಯಮ ಕ್ರಮಾಂಕ ಬಲಿಷ್ಠ:

ಭಾರತ ತಂಡವು ಆರಂಭಿಕರಿಗಿಂತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ಸಾಕಷ್ಟು ಸದೃಢರಾಗಿದ್ದು ಇತ್ತೀಚಿನ ಆಸ್ಟ್ರೇಲಿಯಾ, ನ್ಯೂಜಿಲೆಂಡ್‍ಗಳ ಟೆಸ್ಟ್ ಸರಣಿಯಲ್ಲಿ ಸಾಬೀತಾಗಿದೆ. ಮಧ್ಯ ಕ್ರಮಾಂಕದಲ್ಲಿ ಸ್ವತಹ ನಾಯಕ ವಿರಾಟ್ ಕೊಹ್ಲಿ ಬಲಿಷ್ಠರಾಗಿರುವುದೇ ಅಲ್ಲದೆ ಚೇತೇಶ್ವರ ಪೂಜಾರ, ಅಜೆಂಕ್ಯಾ ರಹಾನೆ , ವೃದ್ದಿಮಾನ್ ಸಹಾ ಕೂಡ ಸಮರ್ಥರಾಗಿರುವುದರಿಂದಲೇ ಯುವಿಗೆ ಸ್ಥಾನ ದೊರೆಯದೇ ಕರ್ನಾಟಕದ ಕರುಣ್‍ನಾಯರ್‍ಗೆ ಮಣೆ ಹಾಕಲಾಗಿದೆ.

ಟೆಸ್ಟ್‍ನಲ್ಲಿ ಉತ್ತಮ ಅಲೌಂಡರ್ ಅಲ್ಲ:

ಯುವರಾಜ್‍ಸಿಂಗ್ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‍ನಲ್ಲಿ ಉತ್ತಮ ಅಲೌಂಡರ್ ಆಗಿ ಬಿಂಬಿಸಿಕೊಂಡಿದ್ದರೆಯೇ ಹೊರತು ಟೆಸ್ಟ್ ನಲ್ಲಿ ಅವರಿಂದ ಉತ್ತಮ ಪ್ರದರ್ಶನ ಬಂದಿಲ್ಲ. ಅಲ್ಲದೆ ಈ ವಿಭಾಗದಲ್ಲೂ ರವಿಚಂದ್ರನ್ ಅಶ್ವಿನ್, ರವೀಂದ್ರಾ ಜಡೇಜಾ ಉತ್ತಮ ಅಲೌಂಡರ್‍ಗಳಾಗಿರುವುದರಿಂದ ಇಲ್ಲಿಯೂ ಯುವಿ ಫ್ಲಾಪ್ ಆಗಿದ್ದು ಆ ಸ್ಥಾನವನ್ನು ಯುವ ಆಟಗಾರ ಹಾರ್ದಿಕ್ ಪಾಂಡ್ಯಾಗೆ ಮಣೆ ಹಾಕಿದೆ.

ಭವಿಷ್ಯ ತಂಡದ ಚಿಂತನೆ:

ಭಾರತ ತಂಡದ ಮುಖ್ಯ ಆಯ್ಕೆಗಾರ ಎಂ.ಎಸ್.ಕೆ.ಪ್ರಸಾದ್ ಅವರು ಭಾರತವನ್ನು ಉತ್ತಮ ತಂಡವಾಗಿ ಬಿಂಬಿಸುವತ್ತ ಗಮನ ಹರಿಸಿರುವುದರಿಂದ ಹೆಚ್ಚಾಗಿ ಯುವ ಆಟಗಾರರತ್ತಲೇ ಆಕರ್ಷಕಿತರಾಗಿದ್ದಾರೆ. ವಿದೇಶದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸ್ವದೇಶ ನೆಲಗಳು ಹೆಚ್ಚು ಸಹಕಾರಿಯಾಗಿರುವುದರಿಂದ ಇಂಗ್ಲೆಂಡ್ ಸರಣಿಗೆ ಹೆಚ್ಚಾಗಿ ಯುವ ಪಡೆಯನ್ನೇ ಆಯ್ಕೆ ಮಾಡಿದ್ದಾರೆ. ಆರಂಭಿಕ ಆಟಗಾರರ ಕೊರತೆಯಿರುವು ದರಿಂದ ಗೌತಮ್ ಗಂಭೀರ್‍ಗೆ ಸ್ಥಾನ ಕಲ್ಪಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ಸದೃಢವಾಗಿದೆ. ಆದ್ದರಿಂದ ಯುವಿಯ ಕ್ರಿಕೆಟ್ ಜೀವನದ ಮುಂದಿನ ಹಾದಿ ಬಹುತೇಕ ದುರ್ಗಮವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin