ಸಿಡಿಲು ಬಡಿದು ತಾಯಿ, ಮಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Tumakuru-Mother-Dead

ಗುಬ್ಬಿ, ಮಾ.7- ನಿನ್ನೆ ಸಂಜೆ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ ತಾಯಿ, ಮಗಳು ಮೃತಪಟ್ಟು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಮಂಜುಳಾ(40) ಮತ್ತು ಇವರ ಮಗಳು ಭಾರತಿ (13) ಮೃತಪಟ್ಟ ದುರ್ದೈವಿಗಳು.  ನಿನ್ನೆ ಸಂಜೆ ಭಾರತಿ ತಮ್ಮ ಸಂತೋಷ್ ಹಾಗೂ ತಂಗಿ ಶಿಲ್ಪಾಳೊಂದಿಗೆ ತಾಯಿ ಮಂಜುಳಾಳನ್ನು ಕರೆತರಲು ಜಮೀನಿನ ಕಡೆ ಹೋಗುತ್ತಿದ್ದರು.  ಈ ವೇಳೆ ಗುಡಗು ಮಳೆ ಪ್ರಾರಂಭವಾಗಿದ್ದು , ಆ ಸಮಯದಲ್ಲಿ ಮರದ ಕೆಳಗೆ ಆಶ್ರಯ ಪಡೆದಾಗ ಸಿಡಿಲು ಬಡಿದು ತಾಯಿ ಮಂಜುಳ ಹಾಗೂ ಭಾರತಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಸಂತೋಷ್ ಮತ್ತು ಶಿಲ್ಪ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಬ್ಬಿ ತಾಲ್ಲೂಕು, ಚೇಳೂರು ಹೋಬಳಿ, ಅನುಪನಕುಂಟೆ ಗ್ರಾಮದಲ್ಲಿ ಸಿಡಿಲು ಬಡಿದು 9 ಕುರಿಗಳು ಸಾವನ್ನಪಿದೆ. ಮಳೆ ಸಿಡಿಲು ಗುಡಗಿನಿಂದ ರಸ್ತೆ ಬದಿಯ ಮರಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳ ಮೇಲೆ ಬಿದ್ದ ಕಾರಣ ಕೆಲವು ಹಳ್ಳಿಗಳು ಕತ್ತಲಲ್ಲಿ ಮುಳುಗಿದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin