ಸಿದ್ದಗಂಗಾ ಮಠದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಕಿರಿಯ ಶ್ರೀಗಳಿಂದ ಭಿಕ್ಷಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

Tumakur--01

ತುಮಕೂರು, ಜ.23- ಸಿದ್ದಗಂಗಾ ಮಠದಲ್ಲಿ ಮುಂದಿನ ತಿಂಗಳು ಜಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮಠದ ಕಿರಿಯ ಶ್ರೀಗಳು ಇಂದು ಭಿಕ್ಷಾಟನೆ ನಡೆಸಿದರು. ಪ್ರತಿ ವರ್ಷವೂ ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಜಾತ್ರೆಯ ಅಂಗವಾಗಿ ಮಠಕ್ಕೆ ವಿವಿಧ ಕಡೆ ಭಕ್ತಾದಿಗಳಿಂದ ಆಹಾರ ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಅದರಿಂದ ಅನ್ನದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಶ್ರೀಗಳ ಅನಾರೋಗ್ಯ ಹಾಗೂ ನಡೆದಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳು ಇಂದು ಬೆಳಗ್ಗೆ ಬಟವಾಡಿ, ಮಂಡಿಪೇಟೆ , ಎಪಿಎಂಸಿ ಯಾರ್ಡ್ ಸೇರಿದಂತೆ ಇನ್ನಿತರ ಕಡೆ ಭಿಕ್ಷಾಟನೆ ನಡೆಸಿ ಆಹಾರ ಪದಾರ್ಥಗಳನ್ನು ಸಂಪ್ರದಾಯದಂತೆ ಸಂಗ್ರಹಿಸಿದರು.

Facebook Comments

Sri Raghav

Admin