ಸಿದ್ದರಾಮಯ್ಯನವರ ಸರ್ಕಾರದ ಸಾಧನೆ ಶೇ.25 ಮಾತ್ರ, ಉಳಿದ ಶೇ. 75 ಬರಿ ಸುಳ್ಳು

ಈ ಸುದ್ದಿಯನ್ನು ಶೇರ್ ಮಾಡಿ

H vishwanath/cm siddu

ಮೈಸೂರು, ಜೂ.5- ಸರ್ಕಾರದ ಸಾಧನಾ ಸಮಾವೇಶದ ವಿರುದ್ಧ ಹರಿಹಾಯ್ದಿರುವ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ ಶೇ.25 ಮಾತ್ರ. ಉಳಿದ 75 ಬರಿ ಸುಳ್ಳು ಎಂದು ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ ಎಂದಿದ್ದಾರೆ. ಆದರೆ, ಯಾವ ಭರವಸೆ ಈಡೇರಿಸಿದ್ದಾರೆ ಎಂಬ ಬಗ್ಗೆ ಮಾತ್ರ ಮಾಹಿತಿ ನೀಡಿಲ್ಲ ಎಂದು ಕಟುಕಿದರು.ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ 10 ಸಾವಿರ ಕೋಟಿ ಹಣ ಬಿಡುಗಡೆಯಾಗಿದೆ. ಅದರ ಕಾರ್ಯ ಯೋಜನೆ ಬಗ್ಗೆ ಎಲ್ಲಿ, ಯಾವಾಗ, ಹೇಗೆ ನಡೆಸಬೇಕು ಎಂದು ಒಂದು ಸಭೆಯನ್ನೂ ನಡೆಸಿಲ್ಲ ಎಂದರು.  ಲೋಕಾಯುಕ್ತವನ್ನು ರದ್ದುಮಾಡಿ ಎಸಿಬಿಯನ್ನು ರಚಿಸಿದ್ದಾರೆ. ಎಸಿಬಿಗೆ ಲಕ್ಷಾಂತರ ರೂ. ಖರ್ಚಾಗುತ್ತಿದೆ. ಇದರಿಂದ ಏನು ಸಾಧನೆ ಮಾಡಿದಂತಾಗಿದೆ ಎಂದು ಪ್ರಶ್ನಿಸಿದರು.

ಬೇಕೋ, ಬೇಡವೋ ಯೋಚಿಸುತ್ತಿದ್ದೇನೆ:

ಪಕ್ಷ ಬಿಡುತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಇರುವುದೋ ಬಿಡುವುದೋ ನೀವೇ ಹೇಳಿ ಎಂದು ಹಾಡನ್ನು ನೆನಪಿಸಿಕೊಂಡು, ಈ ಊರಿನಲ್ಲಿ ಇರಬೇಕೋ, ಬೇಡವೋ ಎಂಬುದನ್ನು ಯೋಚಿಸುತ್ತಿದ್ದೇನೆ ಎಂದರು.  ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಸೋನಿಯಾ ಅಥವಾ ರಾಹುಲ್‍ಗಾಂಧಿ ಅವರ ಫೋಟೋಗಳು ಕಾಣಿಸಿಕೊಂಡಿಲ್ಲ. ಮೂಲ ಕಾಂಗ್ರೆಸಿಗರು ಸಮಾವೇಶದಲ್ಲಿ ಯಾರೂ ಇರಲಿಲ್ಲ. ಇದು ವಲಸಿಗರ ಸಮಾವೇಶವಾಗಿತ್ತು ಎಂದು ಕಿಡಿಕಾರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin