ಸಿದ್ದು ಸರ್ಕಾರಕ್ಕೆ 4 ವರ್ಷ : ಫಲಾನುಭವಿಗಳಿಗೆ ಚಿತ್ರದುರ್ಗ ಕೋಟೆ ದರ್ಶನ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Chitradurga--02

ಚಿತ್ರದುರ್ಗ, ಮೇ 13- ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಆಯೋಜಿಸಿರುವ ಜನರಿಗೆ ನಮನ-ಜನರಿಗೆ ಮನನ ಕಾರ್ಯಕ್ರಮಕ್ಕೆ ಆಗಮಿಸಿದ ಫಲಾನುಭವಿಗಳಿಗೆ ಅಧಿಕಾರಿಗಳು ಕೋಟೆ ದರ್ಶನ ಮಾಡಿಸಿದರು. ವಿವಿಧ ಜಿಲ್ಲೆಗಳ ನೂರಾರು ಹಳ್ಳಿಗಳಿಂದ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಆಗಮಿಸಿದ ಫಲಾನುಭವಿಗಳಿಗೆ ಐತಿಹಾಸಿಕ ಕೋಟೆ ದರ್ಶನ ಮಾಡಿಸಿದರು. ಸಮಾವೇಶದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಗಮಿಸಿದ ಫಲಾನುಭವಿಗಳು ಚಿತ್ರದುರ್ಗದ ವಿವಿಧ ಐತಿಹಾಸಿಕ ಸ್ಥಳಗಳು ಹಾಗೂ ಕೋಟೆಗೆ ತೆರಳಿ ಸಂತಸಪಟ್ಟರು.ಇತಿಹಾಸ ಪ್ರಸಿದ್ಧ ಕೋಟೆ ದರ್ಶನ ಭಾಗ್ಯ ಕಲ್ಪಿಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 400ಕ್ಕೂ ಹೆಚ್ಚು ಫಲಾನುಭವಿಗಳು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಆಗಮಿಸಿದ್ದರಿಂದ ಚಿತ್ರದುರ್ಗವೆಲ್ಲಾ ಕೆಂಪಾಗಿ ಕಾಣುತ್ತಿತ್ತು. ನಗರದೆಲ್ಲೆಡೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನ ಪರದಾಡುತ್ತಿದ್ದದ್ದು ಕಂಡು ಬಂತು.

< Eesanje News 24/7 ನ್ಯೂಸ್ ಆ್ಯಪ್ >

 Click Here to Download  :  Android / iOS  

Facebook Comments

Sri Raghav

Admin