ಸಿದ್ದೇಶ್ ಕುಟುಂಬಕ್ಕೆ ರುದ್ರೇಶ್‍ಗೌಡ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

beluru3

ಬೇಲೂರು, ಏ.24- ಕಳೆದ ವಾರ ಕೆರೆ ಹೂಳು ತೆಗೆಯುತ್ತಿದ್ದ ಸಂದರ್ಭದಲ್ಲಿ ಸಿಡಿಲಿಗೆ ಸಿಲುಕಿ ಸಾವನ್ನಪ್ಪಿದ್ದ ಗಂಗೂರು ಗ್ರಾಮದ ಸಿದ್ದೇಶ್ ಕುಟುಂಬಕ್ಕೆ ಶಾಸಕ ವೈ.ಎನ್.ರುದ್ರೇಶಗೌಡ 4 ಲಕ್ಷ ರೂಗಳ ಚೆಕ್ಕನ್ನು ವಿತರಿಸಿದರು.ಮೃತ ಕುಟುಂಬಕ್ಕೆ ಚೆಕ್ ವಿತರಿಸಿ ಮಾತನಾಡಿ, ವೈ.ಎನ್.ರುದ್ರೇಶಗೌಡ, ತಾಲೂಕಿನ ಹಳೇಬೀಡು ಹೋಬಳಿ ಗಂಗೂರು ಗ್ರಾಮದ ಸಿದ್ದೇಶ ಎಂಬುವರು ಟ್ರಾಕ್ಟರ್‍ನಲ್ಲಿ ಮಾದಿಹಳ್ಳಿ ಗ್ರಾಮದ ಕೆರೆಯಲ್ಲಿ ಹೊಳು ತೆಗೆಯುತ್ತಿದ್ದ ಸಂದರ್ಭ ರಭಸವಾಗಿ ಬಂದ ಸಿಡಿಲಿಗೆ ಸಿಲುಕಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ನಿಧಿಯಡಿ ಅವರ ಕುಟುಂಬಸ್ಥರಿಗೆ ತಾಲೂಕು ಆಡಳಿತದಿಂದ 4 ಲಕ್ಷ ರೂಗಳ ಪರಿಹಾರ ನೀಡಲಾಗುತ್ತಿದ್ದು, ಈ ಪರಿಹಾರದ ಹಣವನ್ನು ದುಂದು ವೆಚ್ಚ ಮಾಡದೆ ಉತ್ತಮ ಕೆಲಸಕ್ಕೆ ಬಳಸಬೇಕು ಎಂದು ತಿಳಿಸಿದರು.ತಹಸಿಲ್ದಾರ್ ಪುಟ್ಟಶೆಟ್ಟಿ, ಬಗರ್‍ಹುಕುಂ ಸಮಿತಿ ಸದಸ್ಯ ಎಸ್.ಎನ್.ಲಿಂಗೇಶ್, ಶಿರಸ್ತ್ತೆದಾರರಾದ ಕೃಷ್ಣಮೂರ್ತಿ, ಗುಂಡಣ್ಣ ಹಾಗೂ ಕುಟುಂಬಸ್ಥರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin