ಸಿನಿಮಾಗಳು ತೋಪೆದ್ದು ಹೋದರೂ ಕುಗ್ಗಿಲ್ಲ ಸನ್ನಿ ಜನಪ್ರಿಯತೆ

ಈ ಸುದ್ದಿಯನ್ನು ಶೇರ್ ಮಾಡಿ

Sunny-Leon

ಸನ್ನಿ ಲಿಯೋನ್-ತನ್ನ ಮಾದಕ ಮೈಮಾಟದಿಂದ ಭಾರತದ ಚಿತ್ರರಂಗದಲ್ಲಿ ಸಮೂಹ ಸನ್ನಿ ಸೃಷ್ಟಿಸಿದ ಸೆಕ್ಸ್ ಸಿಂಬಲ್ ನಟಿ. ವಿವಾದಗಳು ಮತ್ತು ಈಕೆ ನಟಿಸಿದ ಸಿನಿಮಾಗಳು ತೋಪೆದ್ದು ಹೋದರೂ ಸನ್ನಿಯ ಜನಪ್ರಿಯತೆಗೆ ಕುಂದುಂಟಾಗಿಲ್ಲ. ಇದಕ್ಕೆ ಸಾಕ್ಷಿ ಕಳೆದ ಶುಕ್ರವಾರ ತೆರೆಕಂಡ ಬೀಮಾನ್ ಲವ್ ಸಿನಿಮಾ. ಈ ಚಿತ್ರ ಅತ್ಯಂತ ಕೆಟ್ಟದಾಗಿದೆ ಎಂದು ವಿಮರ್ಶಕರು ವಿಮರ್ಶೆಗಳನ್ನು ಗೀಚಿದ್ದಾರೆ. ಆದರೆ ಸನ್ನಿಯ ಮಾದಕತೆ ಮತ್ತು ಅಂಗಾಂಗಗಳ ಅನಾವರಣಕ್ಕೆ ಈ ಚಿತ್ರದಲ್ಲಿ ಬರವಿಲ್ಲ.   ಯಾವುದೂ ಇಲ್ಲಿ ಗುಪ್ತ್ ಗುಪ್ತ್ ಆಗಿಲ್ಲ. ಕೆಲವು ದೃಶ್ಯಗಳು ಮತ್ತು ಆಕೆ ಧರಿಸಿದ ಬಿಗಿ ಉಡುಪುಗಳು ಸಿನಿಮಾಗೆ ಅನಿವಾರ್ಯವಾದರೂ ಅತಿ ಎನಿಸುವಷ್ಟು ಇದೆ. ಹೀಗಾಗಿ ಸಿನಿಮಾದ ಸ್ಟೋರಿ ಲೈನ್ ಏನೇ ಇದ್ದರೂ ಆಕೆಯ ಅಭಿಮಾನಿಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸನ್ನಿಯನ್ನು ಕಣ್ತುಂಬಿಕೊಂಡಿದ್ದಾರೆ.

ಅಕೆಯ ಕಟ್ಟಾ ಅಭಿಮಾನಿಗಳಿಗೆ ಬೀಮಾನ್ ಲವ್ ಚೆನ್ನಾಗಿಲ್ಲ ಅಥವಾ ಸನ್ನಿ ನೀಡಿರುವ  ಎಕ್ಸ್ಪೋಸ್ಗಳು ಅತಿಯಾಗಿವೆ ಎಂದು ಹೇಳಲು ಮನಸ್ಸಿಲ್ಲ.
ಬದಲಿಗೆ ಈ ಚಿತ್ರದಲ್ಲಿ ಕಥೆ ಪೂರಕವಾಗಿದೆ. ಅನ್ಯಾಯಕ್ಕೆ ಒಳಗಾದ ಓರ್ವ ಹೆಣ್ಣು ಯಾವ ರೀತಿ ಸೇಡು-ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬುದನ್ನು ಸಿನಿಮಾದಲ್ಲಿ ಚೆನ್ನಾಗಿ ಬಿಂಬಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ ಚಿತ್ರ ತೋಪೆದ್ದರೂ ಸನ್ನಿಯ ಮಾದಕತೆ ಮತ್ತು ಜನಪ್ರಿಯತೆಗೆ ಕೊಂಕಿಲ್ಲ. ಸನ್ನಿ ನಿಜಕ್ಕೂ ಅಭಿಮಾನಿಗಳ ಪಾಲಿಗೆ ಸಮೂಹ ಸನ್ನಿ ಎನ್ನಲು ಅಡ್ಡಿ ಇಲ್ಲ. ಏನಂತೀರಾ ?

► Follow us on –  Facebook / Twitter  / Google+

Facebook Comments

Sri Raghav

Admin