ಸಿನಿಮಾ ಥಿಯೇಟರ್’ನಲ್ಲಿ ಯುವತಿ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Gang-Rape--01
ಹೈದರಾಬಾದ್, ಫೆ.2-ಸಿನಿಮಾ ಹಾಲ್ ಒಳಗೆ 19 ವರ್ಷ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಈ ಸಂಬಂಧ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪರಿಚಿತ ಯುವಕನಿಂದಲೇ ಈ ಕೃತ್ಯ ನಡೆದಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಉತ್ತರ ಪ್ರದೇಶದ ಘಟನೆ: ಎರಡು ತಿಂಗಳ ಹಿಂದೆ ಉತ್ತರ ಪ್ರದೇಶದ ಮೀರುತ್ ಜಿಲ್ಲೆಯ ಚಿತ್ರಮಂದಿರವೊಂದರಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆರೋಪಿಯು ಮೀರುತ್‍ನಮವಾನದಲ್ಲಿ ಶಾಪಿಂಗ್‍ಗಾಗಿ ಬರುವಂತೆ ಯುವತಿಗೆ ಫೋನ್ ಮಾಡಿದ್ದ. ಶಾಪಿಂಗ್ ನಂತರ ಇವರಿಬ್ಬರು ಸಿನಿಮಾಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿ ಮತ್ತೊಬ್ಬ ಸ್ನೇಹಿತನೊಬ್ಬ ಜೊತೆಗೂಡಿದ. ಸಿನಿಮಾ ಪ್ರದರ್ಶನವಾಗುತ್ತಿದ್ದಾಗ ಇಬ್ಬರು ಯುವತಿಯನ್ನು ಥಿಯೇಟರ್‍ನ ಮೇಲ್ಭಾಗಕ್ಕೆ ಬಲವಂತವಾಗಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ನಂತರ ಈ ಇಬ್ಬರು ಯುವಕರನು ಪೊಲೀಸರು ಬಂಧಿಸಿದ್ದರು.

Facebook Comments

Sri Raghav

Admin