ಸಿಪ್ರಸ್ ಅಧ್ಯಕ್ಷರನ್ನು ಭೇಟಿಯಾದ ಸುಷ್ಮಾ ಸ್ವರಾಜ್
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ,ಏ.28– ಭಾರತೀಯ ವಿದೇಶಾಂತ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸಿಪ್ರಸ್ನ ಅಧ್ಯಕ್ಷ ನಿಕೋಸ್ ಅನಸ್ತಾಸಿಯಡ್ಸ್ ಅವರೊಂದಿಗೆ ಇಂದು ಪ್ರಾದೇಶಿಕ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚೆ ನಡೆಸಿದರು. ಐದು ದಿನಗಳ ಭಾರತ ಪ್ರವಾಸದ ನಿಮಿತ್ತ ಇಂದು ದೆಹಲಿಗೆ ಆಗಮಿಸಿದ ಸಿಪ್ರಸ್ನ ಅಧ್ಯಕ್ಷ ನಿಕೋಸ್ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು. ನಂತರ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಿಪ್ರಸ್ ಅಧ್ಯಕ್ಷ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದು, ಇದಕ್ಕೂ ಮುನ್ನ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ ಅವರು ಎರಡು ರಾಷ್ಟ್ರಗಳ ಸಹಕಾರದ ಬಗ್ಗೆ ಚರ್ಚೆ ನಡೆಸಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments