ಸಿಬ್ಬಂಧಿ ಪ್ರತಿಭಟನೆ, ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತ, ಪರದಾಡಿದ ಪ್ರಯಾಣಿಕರು

ಈ ಸುದ್ದಿಯನ್ನು ಶೇರ್ ಮಾಡಿ

Metro-Protest--01

ಬೆಂಗಳೂರು, ಜು.7-ಮೆಟ್ರೋ ಸಿಬ್ಬಂದಿ ಬಂಧನ ಖಂಡಿಸಿ ಮೆಟ್ರೋ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ ಇಂದು ಪ್ರತಿಭಟನೆ ನಡೆಸಿದ ಪರಿಣಾಮ ನಗರದ ಸಹಸ್ರಾರು ಪ್ರಯಾಣಿಕರು ಪರದಾಡುವಂತಾಯಿತು.  ನಿನ್ನೆ ಮೆಟ್ರೋ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆ ನಡುವೆ ಮಾರಾಮಾರಿ ನಡೆದ ಹಿನ್ನೆಲೆಯಲ್ಲಿ ಇಂದು ಮೆಟ್ರೋ ಪ್ರಯಾಣಿಕರು ತೊಂದರೆಗೆ ಒಳಗಾದರು.  ಮೆಟ್ರೋ ಸಿಬ್ಬಂದಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳ್ಳಂಬೆಳಗ್ಗೆ ಮೆಟ್ರೋ ನಂಬಿ ಬಂದ ಪ್ರಯಾಣಿಕರಿಗೆ ಶಾಕ್ ಆಗಿತ್ತು. ನಿನ್ನೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಮೆಟ್ರೋ ಕೆಲವು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಈ ಬಂಧಿಸಿದ್ದು, ಅವರನ್ನು ಬಿಡುಗಡೆಗೊಳಿಸುವ ತನಕ ಮೆಟ್ರೋ ರೈಲು ಓಡಿಸುವುದಿಲ್ಲ ಎಂದು ಪ್ರತಿಭಟನೆ ಹಾದಿ ತುಳಿದಿರುವುದರಿಂದ ಬೆಳಗ್ಗೆಯಿಂದ ನಗರದಲ್ಲಿ ಮೆಟ್ರೋ ಸಂಚಾರ ಇಲ್ಲ.

ಬಿಎಂಆರ್‍ಸಿಎಲ್ ಸಿಬ್ಬಂದಿ ಮತ್ತು ಸರ್ಕಾರದ ಅಧಿಕಾರಿಗಳು ಸಿಬ್ಬಂದಿಯ ಮನವೊಲಿಕೆ ಯತ್ನ ಮಾಡಿದರಾದರೂ ಪ್ರತಿಭಟನಾನಿರತರು ಜಗ್ಗಲಿಲ್ಲ. ಎಸ್ಮಾ ಕಾಯ್ದೆ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.  ಒಟ್ಟಾರೆ ಕಳೆದ ತಿಂಗಳಷ್ಟೇ ಲೋಕಾರ್ಪಣೆಯಾಗಿದ್ದು, ನಮ್ಮ ಮೆಟ್ರೋ ಕ್ಷುಲ್ಲಕ ಕಾರಣಕ್ಕೆ ಸ್ಥಗಿತಗೊಂಡು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದೆ. ಕೂಡಲೇ ಬಿಎಂಆರ್‍ಸಿಎಲ್ ಆಡಳಿತ ಮಂಡಳಿ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

Metro-Protest--02

ಏನಿದು ಗಲಾಟೆ:

ನಗರದ ಸರ್.ಎಂ.ವಿಶ್ವೇಶ್ವರಯ್ಯ (ಸೆಂಟ್ರಲ್ ಕಾಲೇಜು) ನಿಲ್ದಾಣದಲ್ಲಿ ನಿನ್ನೆ ಮೆಟ್ರೋ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾಪಡೆ ಪೊಲೀಸರ ನಡುವೆ ಗಲಾಟೆ ನಡೆದಿತ್ತು. ಈ ಘಟನೆ ಸಂಬಂಧ ಕಾನ್‍ಸ್ಟೆಬಲ್ ಆನಂದ್ ಗುಡ್ಡದ್ ಎಂಬುವರು ಹಲಸೂರುಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಐವರು ಮೆಟ್ರೋ ಸಿಬ್ಬಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ಈ ಘಟನೆ ಖಂಡಿಸಿ ಮೆಟ್ರೋ ಸಿಬ್ಬಂದಿ ಪ್ರತಿಭಟನೆಗಿಳಿದಿದ್ದಾರೆ. ಬಂಧಿತರ ಬಿಡುಗಡೆಗೆ ಆಗ್ರಹಿಸಿದ್ದಾರೆ.

ನಿನ್ನೆ ನಡೆದಿದ್ದೇನು? :

ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ತಾಂತ್ರಿಕ ಕಾರಣಗಳಿಂದ ನಿಲ್ದಾಣದ ಲೋಹ ಶೋಧಕ ಯಂತ್ರ ಹಾಗು ಎಕ್ಸ್‍ಲೇಟರ್ ಕಾರ್ಯ ಸ್ಥಗಿತವಾಗಿತ್ತು. ಈ ವೇಳೆ ನಿಲ್ದಾಣ ಒಳಗೆ ಹೋಗುತ್ತಿದ್ದ ಪ್ರಯಾಣಿಕರನ್ನು ಸಿಬ್ಬಂದಿಯೇ ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದರು. ಇದೇ ಸಂದರ್ಭದಲ್ಲಿ ನಿಲ್ದಾಣದೊಳಗೆ ಹೋಗುತ್ತಿದ್ದ ಮೆಟ್ರೋ ಎಲೆಕ್ಟ್ರಾನಿಕ್ಸ್ ನಿರ್ವಹಣಾ ಘಟಕದ ಉದ್ಯೋಗಿ ರಾಕೇಶ್ ತಪಾಸಣೆಗೆ ಒಪ್ಪಲಿಲ್ಲ.ಮೆಟ್ರೋ ನೌಕರ ಎಂದು ಸಬೂಬು ಹೇಳಿ ಒಳಗೆ ಹೋದರು.

ಅಷ್ಟರಲ್ಲಿ ಲೋಹ ಶೋಧಕ ಯಂತ್ರ ಪ್ರಾರಂಭವಾಗಿತ್ತು. ಭದ್ರತಾ ಸಿಬ್ಬಂದಿ ತಪಾಸಣೆಗೊಳಗಾಗುವಂತೆ ತಮ್ಮ ಬ್ಯಾಗ್ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಅದೇ ಸಮಯಕ್ಕೆ ನಿಲ್ದಾಣದಿಂದ ಹೊರಗೆ ಬರುತ್ತಿದ್ದ ಕಾನ್‍ಸ್ಟೆಬಲ್ ಲಕ್ಷ್ಮಣ್, ರಾಕೇಶ್‍ನನ್ನು ತಡೆದಿದ್ದರು. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆ ಕೂಡ ನಡೆಯಿತು.
ನಂತರ ಪೊಲೀಸರ ಜೊತೆ ಗಲಾಟೆ ನಡೆದು ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಹಲವರು ಗಾಯಗೊಂಡರು. ಕಾನ್‍ಸ್ಟೆಬಲ್ ಆನಂದ್ ಎಂಬುವರು ಪೆÇಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಐವರು ಮೆಟ್ರೋ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಯಿತು.

ಈ ಘಟನೆ ಖಂಡಿಸಿ ನಿನ್ನೆಯೇ ಬೈಯ್ಯಪ್ಪನಹಳ್ಳಿ ಆಡಳಿತ ವಿಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾತ್ರಿಯೂ ಕೂಡ ಹಲವು ಉದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂದು ಬೆಳಗ್ಗೆಯೂ ಕೂಡ ಮೆಟ್ರೋ ಸಿಬ್ಬಂದಿ ಪ್ರತಿಭಟನೆ ಮುಂದುವರೆಸಿ ಬಂಧಿಸಿರುವವರ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಎರಡೂ ಕಡೆಯಿಂದ ದೂರು ದಾಖಲು:

ರಾಜ್ಯ ಕೈಗಾರಿಕಾ ಪಡೆ ಸಿಬ್ಬಂದಿ ಘಟನೆ ಸಂಬಂಧ ದೂರು ನೀಡಿದ್ದು, ಎಫ್‍ಐಆರ್ ದಾಖಲಿಸಿ ಇಬ್ಬರು ಮೆಟ್ರೋ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅದೇ ರೀತಿ ಮೆಟ್ರೋ ಸಿಬ್ಬಂದಿ ಕೂಡ ದೂರು ನೀಡಿದ್ದು, ಇಬ್ಬರು ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

 

 

Facebook Comments

Sri Raghav

Admin