ಸಿಯೆರಾ ಲೋನ್‍ನಲ್ಲಿ ಅಮೂಲ್ಯ 706 ಕ್ಯಾರೆಟ್ ಡೈಮೆಂಡ್ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Dimand--01

ಫ್ರೀಟೌನ್, ಮಾ.17-ವಿಶ್ವದ ಅತಿದೊಡ್ಡ ವಜ್ರ ನಿಕ್ಷೇಪ ಸಿಯೆರಾ ಲೋನ್‍ನ ಪೂರ್ವ ಭಾಗದ ಗಣಿಯಲ್ಲಿ 706 ಕ್ಯಾರೆಟ್‍ನ ಅಮೂಲ್ಯ ಡೈಮೆಂಡ್ ಪತ್ತೆಯಾಗಿದೆ. ಈವರೆಗೆ ವಿಶ್ವದಲ್ಲಿ ಕಂಡುಬಂದಿರುವ 10ನೇ ಅತಿ ದೊಡ್ಡ ವಜ್ರ ಇದಾಗಿದೆ. ಈ ವಜ್ರವನ್ನು ಅಧ್ಯಕ್ಷ ಎರ್ನೆಸ್ಟ್ ಬೈ ಕರೋಮಾ ಅವರಿಗೆ ಒಪ್ಪಿಸಲಾಗಿದೆ.
ಸಿಯೆರಾ ಲೋನ್‍ನ ವಜ್ರ ಸಮೃದ್ಧ ಕೊನೊ ಪ್ರಾಂತ್ಯದಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ಎಮ್ಯಾನುಯೆಲ್ ಮೊಮೋ ಎಂಬುವರಿಗೆ ಕಚ್ಚಾ ರೂಪದಲ್ಲಿದ್ದ ಈ ಡೈಮೆಂಡ್ ಪತ್ತೆಯಾಗಿದೆ ಎಂದು ಗಣಿ ಸಚಿವ ಮಿನ್‍ಕೈಲು ಮನ್ಸಾರೆ ತಿಳಿಸಿದ್ದಾರೆ. 709 ಕ್ಯಾರೆಟ್‍ನ ಈ ದೊಡ್ಡ ವಜ್ರವು ಭಾರೀ ಮೌಲ್ಯ ಹೊಂದಿದೆ. ಇದನ್ನು ಅಧ್ಯಕ್ಷರಿಗೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin