ಸಿರಿಯಾದಲ್ಲಿ ಕಳೆದ 5 ವರ್ಷಗಳಲ್ಲಿ ಉಗ್ರರ ಅಟ್ಟಹಾಸಕ್ಕೆ 3 ಮಂದಿ ಲಕ್ಷ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

3-lack-killed

ಬೈರೂತ್, ಆ.20- ಯುದ್ಧ ಪೀಡಿತ ಸಿರಿಯಾದಲ್ಲಿ ಘರ್ಷಣೆ ಮತ್ತು ಹಿಂಸಾಚಾರ ಭುಗಿಲೆದ್ದ ಕಳೆದ ಐದೂವರೆ ವರ್ಷಗಳಲ್ಲಿ 15,000 ಮಕ್ಕಳು ಸೇರಿದಂತೆ 2,90,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಆತಂಕಕಾರಿ ಅಂಕಿ-ಅಂಶಗಳನ್ನು ನೀಡಿದೆ.  ಸಿರಿಯಾದ ಅಲೆಪ್ರೊದ ಪೂರ್ವ ಭಾಗಗಳಲ್ಲಿ ಅಂದಾಜು 2,50,000 ಮಂದಿ ಸಿಲುಕಿದ್ದು, ಅವರಲ್ಲಿ 1,00,000 ಮಕ್ಕಳಿದ್ದಾರೆ ಎಂದು ಯುನಿಸೆಫ್ನ ಜೂಲಿಯಟ್ ಟಾಮ ತಿಳಿಸಿದ್ದಾರೆ.  ಸಮರ ಸಂತ್ರಸ್ತ ಸಿರಿಯಾದ ಕನಿಷ್ಠ 2.8 ದಶಲಕ್ಷ ಮಕ್ಕಳು ದೇಶದ ಕೆಲವೆಡೆ ಹಾಗೂ ನೆರೆಹೊರೆ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿದ್ದು, ವಿದ್ಯಾಭ್ಯಾಸ ಮತ್ತು ಮಕ್ಕಳ ಹಕ್ಕುಗಳಿಂದ ವಂಚಿತರಾಗಿದ್ದಾರೆ.

ಸಿರಿಯಾದ ದೇಶದಾದ್ಯಂತ ಕನಿಷ್ಠ 6 ದಶಲಕ್ಷ ಮಕ್ಕಳಿಗೆ ಮಾನವೀಯತೆಯ ನೆರವಿನ ಅಗತ್ಯವಿದೆ ಎಂದು ಹೇಳಿರುವ ಜೂಲಿಯಟ್ ಟಾಮ, ಸುಮಾರು ಆರು ಲಕ್ಷ ಮಂದಿ ದೇಶದಲ್ಲಿ ಅತಂತ್ರ ಸ್ಥಿತಿಗೆ ಸಿಲುಕಿ ನರಳುತ್ತಿದ್ದಾರೆ.  ಸಿರಿಯಾದ ಅಲೆಪ್ಪೊ ಪ್ರದೇಶದಲ್ಲಿ ವೈಮಾನಿಕ ದಾಳಿಯಿಂದ ಅವಶೇಷಗಳಡಿ ಸಿಲುಕಿ ತೀವ್ರ ಗಾಯಗೊಂಡ ಪುಟ್ಟ ಬಾಲಕ ಒಮ್ರಾನ್ ಡಾಕ್ನೀಶ್ನ ಮನ ಕಲಕುವ ಚಿತ್ರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಸಿರಿಯಾದ ವಾಸ್ತವ ಚಿತ್ರಣ ಮತ್ತೊಮ್ಮೆ ಸಾಬೀತಾದ ನಂತರ ಇಡೀ ವಿಶ್ವ ಆತಂಕಗೊಂಡಿದ್ದು, ಪರಿಹಾರೋಪಾಯ ಮತ್ತು ನೆರವಿಗೆ ಕಾರ್ಯೋನ್ಮುಖವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.