ಸಿರಿಯಾದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ಉಗ್ರರ ದಾಳಿ : 32 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

32-Killed--01

ಡಮಾಸ್ಕಸ್, ಮೇ 3- ಹಿಂಸಾಚಾರ ಪೀಡಿತ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಬಂಡುಕೋರರ ಅಟ್ಟಹಾಸ ಮುಂದುವರಿದಿದೆ. ಹಸಕೆಹ್ ಪ್ರಾಂತ್ಯದ ನಿರಾಶ್ರಿತರ ಶಿಬಿರವೊಂದರ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 32 ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ.  ಈ ಪ್ರಾಂತ್ಯದಲ್ಲಿನ ಇರಾಕಿ ಮತ್ತು ಸಿರಿಯಾ ನಿರಾಶ್ರಿತರ ಶಿಬಿರದಲ್ಲಿ ಕನಿಷ್ಠ ಐವರು ಮಾನವ ಬಾಂಬ್ ಆಕ್ರಮಣಕಾರರು ತಮ್ಮನ್ನು ತಾವು ಸ್ಫೋಟಿಸಿಕೊಂಡರು.



ಈ ಆತ್ಮಾಹತ್ಯಾ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 32 ಮಂದಿ ಮೃತರಾದರು ಎಂದು ಯುನೈಟೆಡ್ ಕಿಂಗ್‍ಡಂ ಮೂಲಕ ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದೆಲ್ ರೆಹಮಾನ್ ಹೇಳಿದ್ದಾರೆ.  ಇರಾಕ್‍ನ ಐಎಸ್ ನಿಯಂತ್ರಿತ ಪ್ರದೇಶದಿಂದ ಪಲಾಯನ ಮಾಡಿರುವ ಸಾವಿರಾರು ಮಂದಿ ಸಿರಿಯಾದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin