ಸಿರಿಯಾದಲ್ಲಿ 45 ಬಾರಿ ರಾಸಾಯನಿಕ ಅಸ್ತ್ರ ಬಳಕೆ..!

ಈ ಸುದ್ದಿಯನ್ನು ಶೇರ್ ಮಾಡಿ

Chemical-weapons

ಹೇಗ್(ನೆದರ್‍ಲೆಂಡ್ಸ್), ಏ.30- ಹಿಂಸಾಚಾರ ಪೀಡಿತ ಸಿರಿಯಾದಲ್ಲಿ 2016ರ ಅಂತ್ಯ ಭಾಗದಿಂದ 45 ಬಾರಿ ಮಾರಕ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯೊಂದು ತನಿಖೆ ನಡೆಸುತ್ತಿದೆ. ಇವುಗಳ ಬಳಕೆ ಕುರಿತು ದೊಡ್ಡ ಪಟ್ಟಿಯೇ ಇದೆ ಎಂದು ರಾಸಾಯನಿಕ ಅಸ್ತ್ರಗಳನ್ನು ನಾಶಪಡಿಸುವ ಜವಾಬ್ದಾರಿ ಹೊಂದಿರುವ ಜಾಗತಿಕ ಸಂಸ್ಥೆ ರಾಸಾಯನಿಕ ಅಸ್ತ್ರಗಳ ನಿಷೇಧ ಸಂಘಟನೆ (ಒಪಿಸಿಡಬ್ಲ್ಯು) ಹೇಳಿದೆ.ಕಳೆದ ವರ್ಷಾಂತ್ಯ ಭಾಗದಲ್ಲಿ ರಾಸಾಯನಿಕ ಅಸ್ತ್ರಗಳ ಪ್ರಯೋಗದ 30 ಪ್ರಕರಣಗಳು ಹಾಗೂ ಈ ವರ್ಷದ ಆರಂಭದಿಂದ ಈವರೆಗೆ 15 ಘಟನೆಗಳು ನಡೆದಿವೆ ಎಂದು ಸಂಘಟನೆ ಮಹಾನಿರ್ದೇಶಕ ಅಹಮದ್ ಉಜಮ್ಚು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವಾರು ಪುಟಗಳ ಪಟ್ಟಿಯನ್ನು ಅವರು ಪ್ರದರ್ಶಿಸಿದರು.   ಉಗ್ರಗಾಮಿಗಳ ಪ್ರಾಬಲ್ಯವಿರುವ ಖಾನ್ ಶೇಖೂನ್ ಪಟ್ಟಣದ ಮೇಲೆ ಏ.4ರಂದು ನಡೆದ ಸರಿನ್ ವಿಷಾನಿಲ ದಾಳಿಯೂ ಇದರಲ್ಲಿ ಸೇರಿದೆ. ಈ ಭೀಕರ ದಾಳಿಯಲ್ಲಿ 31 ಮಕ್ಕಳೂ ಸೇರಿದಂತೆ 88 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin