ಸಿರಿಯಾದ ಐಸಿಸ್ ಉಗ್ರರ ನೆಲೆಗಳ ಮೇಲೆ ಸೇನಾಪಡೆಗಳ ದಾಳಿ :54ಕ್ಕೂ ಹೆಚ್ಚು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

siriya-attack

ಬೈರೂತ್, ನ.17-ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಾಬಲ್ಯವಿರುವ ಪ್ರದೇಶಗಳ ಮೇಲೆ ಮುಂದುವರಿದ ಸೇನಾಪಡೆಗಳ ವಾಯು ದಾಳಿಯಲ್ಲಿ 54ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.  ಪೂರ್ವ ಅಲೆಪೋ ಮತ್ತು ಸಿರಿಯಾದ ಉತ್ತರ ಭಾಗದ ಮೇಲೆ ಯುದ್ಧ ವಿಮಾನಗಳಿಂದ ನಡೆಸಿದ ದಾಳಿಯಲ್ಲಿ ಕೆಲವು ಕಟ್ಟಡಗಳಿಗೆ ಭಾರೀ ಹಾನಿ ಕೂಡ ಸಂಭವಿಸಿದೆ.  ಉಗ್ರರ ಉಪಟಳ ಹೆಚ್ಚಾಗಿರುವ ಅಲೆಪೋ ಮತ್ತು ಇದ್ಲಿಬ್ ಪ್ರಾಂತ್ಯಗಳ ಮೇಲೆ ಸಿರಿಯಾ ಮತ್ತು ರಷ್ಯಾ ಫೈಟರ್ ಜೆಟ್‍ಗಳು ಬಾಂಬ್‍ಗಳ ಮಳೆ ಸುರಿಸಿವೆ. ಈ ಪ್ರದೇಶಗಳಲ್ಲಿ ಬ್ಲಡ್ ಬ್ಯಾಂಕ್ ಸೇರಿದಂತೆ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯ ಘಟಕಗಳಿವೆ. ದಾಳಿಗೆ ತುತ್ತಾಗಿ ಕಟ್ಟಡಗಳು ಉರುಳಿ ಬಿದ್ದಿರುವುದರಿಂದ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಷ್ಯಾ ನೇತೃತ್ವದ ಯುದ್ದ ವಿಮಾನಗಳ ದಾಳಿಯಿಂದಾಗಿ ಈ ಪ್ರದೇಶಗಳಲ್ಲಿರುವ ಸುಮಾರು 2.75 ಲಕ್ಷ ಮಂದಿ ಭಯಭೀತರಾಗಿದ್ದಾರೆ.  ಈ ಎರಡೂ ಪ್ರಾಂತ್ಯಗಳಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ 150 ಬಾರಿ ವಾಯುದಾಳಿಗಳು ನಡೆದಿವೆ ಎಂದು ಸಿರಿಯಾದ ನಾಗರಿಕ ರಕ್ಷಣಾ ದಳ-ವೈಟ್ ಹೆಲ್ಮೆಟ್ ಹೇಳಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin