ಸಿರಿಯಾದ ಹೊಮ್ಸ್ ನಗರದ ಮೇಲೆ ಜೆಟ್ ಬಾಂಬ್ ದಾಳಿ : ಹಲವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Air-Strike--01

ಬೈರುತ್, ಫೆ.9-ಸಿರಿಯಾದ ಹೊಮ್ಸ್ ನಗರದ ಉಗ್ರರ ಪ್ರಾಬಲ್ಯವಿರುವ ಪ್ರದೇಶದ ಮೇಲೆ ಜೆಟ್ ವಿಮಾನಗಳು ನಡೆಸಿದ ಬಾಂಬ್ ದಾಳಿಯಲ್ಲಿ ಅನೇಕರು ಮೃತಪಟ್ಟಿದ್ದಾರೆ. ಆದರೆ ಸಾವು-ನೋವಿನ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಲ್-ವಾಯಿರ್ ಪ್ರದೇಶದ ಮೇಲೆ ಸರ್ಕಾರಿ ಯುದ್ಧ ವಿಮಾನಗಳು ಬಾಂಬ್ ದಾಳಿಗಳನ್ನು ನಡೆಸಿದವು ಎಂದು ಬ್ರಿಟಿಷ್ ಮೂಲದ ಸಿರಿಯನ್ ಅರ್ಬರ್‍ವೇಟರಿ ಫಾರ್ ಹ್ಯುಮನ್ ರೈಟ್ಸ್ ಮತ್ತು ಸಿರಿಯಾ ನಾಗರಿಕ ರಕ್ಷಣಾ ದಳ ತಿಳಿಸಿದೆ.   ಇನ್ನೊಂದು ಮೂಲ ಹೇಳಿರುವಂತೆ, ಈ ದಾಳಿಯಲ್ಲಿ 8 ಮಂದಿ ಮೃತಪಟ್ಟು, 24 ಜನ ಗಾಯಗೊಂಡಿದ್ದಾರೆ.

6 ರೆಡ್‍ಕ್ರಾಸ್ ಸಿಬ್ಬಂದಿ ಹತ್ಯೆ :

ಇನ್ನೊಂದೆಡೆ ಆಫ್ಥಾನಿಸ್ತಾನದ ಮಜರ್-ಎ-ಷರೀಫ್‍ನ ಜೌಜ್‍ಜಾನ್ ಪ್ರಾಂತ್ಯದಲ್ಲಿ ಶಂಕಿತ ಇಸ್ಲಾಂ ಬಂದೂಕುದಾರಿಗಳು ರೆಡ್‍ಕ್ರಾಸ್ ಅಂತಾರಾಷ್ಟ್ರೀಯ ಸಮಿತಿಯ (ಐಸಿಆರ್‍ಸಿ) ಆರು ಅಫ್ಘನ್ ಉದ್ಯೋಗಿಗಳನ್ನು ಕೊಂದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin