ಸಿರಿಯಾ : ಅಮೆರಿಕ ವಾಯು ದಾಳಿಯಲ್ಲಿ 60 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

America-Airstrike--0000011

ರಖಾ, ಆ.18- ಸಿರಿಯಾದ ರಖಾ ನಗರದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳನ್ನು ನಿಗ್ರಹಿಸಲು ಅಮೆರಿಕ ನೇತೃತ್ವದ ಮಿತ್ರಪಡೆಗಳು ಕಳೆದ ನಾಲ್ಕು ದಿನಗಳಲ್ಲಿ ನಡೆಸಿದ ವಾಯುದಾಳಿಗಳಲ್ಲಿ 60ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಐಎಸ್ ಉಗ್ರರನ್ನು ದಮನ ಮಾಡಲು ನಡೆಯುತ್ತಿರುವ ಕಾರ್ಯಾಚರಣೆಗಳಲ್ಲಿ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸೋಮವಾರದಿಂದ ನಡೆಯುತ್ತಿರುವ ವೈಮಾನಿಕ ದಾಳಿಗಳಲ್ಲಿ 21 ಮಕ್ಕಳೂ ಮೃತಪಟ್ಟಿದ್ದಾರೆ. ಯುದ್ಧ ವಿಮಾನಗಳ ದಾಳಿ ನಂತರ ಉರುಳಿಬಿದ್ದ ಕಟ್ಟಡಗಳ ಆವಶೇಷಗಳಿಂದ ಹೆಚ್ಚಿನ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ.

Facebook Comments

Sri Raghav

Admin