ಸಿರಿಯಾ ಆಯ್ತು ಈಗ ಉತ್ತರ ಕೊರಿಯಾಗೆ ಬಿಸಿ ಮುಟ್ಟಿಸಲು ಅಮೆರಿಕ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Trump-Kim

ವಾಷಿಂಗ್ಟನ್, ಏ.9- ರಾಸಾಯನಿಕ ಅಸ್ತ್ರ ದಾಳಿ ಮೂಲಕ ನಾಗರಿಕರ ಸಾವು-ನೋವಿಗೆ ಕಾರಣವಾಗಿದ್ದ ಸಿರಿಯಾ ಮೇಲೆ ಕ್ಷಿಪಣಿ ಆಕ್ರಮಣ ನಡೆಸಿದ್ದ ಅಮೆರಿಕ ಈಗ ಉತ್ತರ ಕೊರಿಯಾಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಅಣ್ವಸ್ತ್ರಗಳ ಉಡಾವಣೆ ಮೂಲಕ ವಿಶ್ವವನ್ನು ಕಂಗೆಡಿಸಿರುವ ಉತ್ತರ ಕೊರಿಯಾಗೆ ಬುದ್ಧಿ ಕಲಿಸಲು ಅಮೆರಿಕದ ಬೃಹತ್ ಯುದ್ಧನೌಕೆಯೊಂದು ಕೊರಿಯಾ ದ್ವೀಪಕಲ್ಪದತ್ತ ಮುನ್ನುಗ್ಗುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಚ್ಚರಿಕೆ ನಡುವೆಯೂ ವಿನಾಶಕಾರಿ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಮುಂದುವರಿಸಿರುವ ಉತ್ತರ ಕೊರಿಯಾಗೆ ತನ್ನ ಸಾಮಥ್ರ್ಯ ತೋರಿಸಲು ನಿರ್ಧರಿಸಿರುವ ಅಮೆರಿಕದ ನೌಕಾಪಡೆ ಕ್ಷಿಪ್ರ ದಾಳಿ ಸಮೂಹ ಪರ್ಯಾಯ ದ್ವೀಪದತ್ತ ಸಾಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸುವ ಸಾಧ್ಯತೆಯಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin