ಸಿರಿಯಾ, ಉತ್ತರ ಕೊರಿಯಾ ಬಿಕ್ಕಟ್ಟು ಶಮನಕ್ಕೆ ಟ್ರಂಪ್-ಪುಟಿನ್ ಮಹತ್ವದ ಸಮಾಲೋಚನೆ

ಈ ಸುದ್ದಿಯನ್ನು ಶೇರ್ ಮಾಡಿ

Trump-And-Putin

ವಾಷಿಂಗ್ಟನ್, ಮೇ 3- ಸಮರ ಸಂತ್ರಸ್ತ ಸಿರಿಯಾ ಯುದ್ಧವನ್ನು ಕೊನೆಗಾಣಿಸಲು ಹಾಗೂ ಉತ್ತರ ಕೊರಿಯಾದಲ್ಲಿ ಸೃಷ್ಟಿಯಾಗಿರುವ ಅತ್ಯಂತ ಅಪಾಯಕಾರಿ ಸನ್ನಿವೇಶವನ್ನು ಇತ್ಯರ್ಥಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಸಹವರ್ತಿ ವ್ಲಾದಿಮಿರ್ ಪುಟಿನ್ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.   ಈ ಉಭಯ ನಾಯಕರು ದೂರವಾಣಿ ಮೂಲಕ ಈ ವಿಷಯಗಳ ಕುರಿತು ಉತ್ತಮ ಮತ್ತು ಆಶಾದಾಯಕ ಸಂಭಾಷಣೆ ನಡೆಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಮಧ್ಯಪ್ರಾಚ್ಯದಾದ್ಯಂತ ತಲೆ ಎತ್ತಿರುವ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಬಗ್ಗೆ ಈ ಎರಡೂ ದೇಶಗಳ ಧುರೀಣರು ಮಾತುಕತೆ ನಡೆಸಿದರು.ಅಲ್ಲದೇ ಸಿರಿಯಾದಲ್ಲಿ ಯುದ್ಧ ಮತ್ತು ರಕ್ತಪಾತ ಕೊನೆಗಾಣಿಸಲು ಹಾಗೂ ಉತ್ತರ ಕೊರಿಯಾದಲ್ಲಿ ಅಣ್ವಸ್ತ್ರಗಳ ಪ್ರಯೋಗ ಬೆದರಿಕೆಯಿಂದ ಉದ್ಭವಿಸಿರುವ ಅಪಾಯಕಾರಿ ಪರಿಸ್ಥಿತಿಯನ್ನು ಬಗೆಹರಿಸಲು ಇರಬಹುದಾದ ಮಾರ್ಗೋಪಾಯಗಳ ಕುರಿತು ಸಂಭಾಷಣೆ ನಡೆಸಿದರು ಎಂದು ವೈಟ್‍ಹೌಸ್ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin