ಸಿರಿಯಾ : ಮದುವೆ ಮನೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 30ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

30-Kiled

ಅಂಕಾರ, ಆ.21-ಸಿರಿಯಾ ಗಡಿಗೆ ಹೊಂದಿಕೊಂಡಿರುವ ಟರ್ಕಿ ದೇಶದ ಗಾಜಿಯಾನ್ಟೆಪ್ನಲ್ಲಿ ನಿನ್ನೆ ಮಧ್ಯರಾತ್ರಿ ಮದುವೆ ಸಮಾರಂಭವೊಂದರ ಮೇಲೆ ನಡೆದ ಆತ್ಮಹತ್ಯಾ ದಾಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು , ಸುಮಾರು ಒಂದು ನೂರು ಜನ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದ್ದು , ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.   ವಿವಾಹ ಮಹೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲೇ ನಡೆದ ಈ ಭೀಕರ ಬಾಂಬ್ ದಾಳಿಯಿಂದಾಗಿ ಇಡೀ ನಗರ ಬೆಚ್ಚಿಬಿದ್ದಿದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು, 94 ಜನ ಗಾಯಗೊಂಡಿದ್ದಾರೆ ಎಂದು ಗಾಜಿಯಾನ್ಟೆಪ್ ಗೌರ್ನೆರ್ ಅಲಿ ಯೆರ್ಲಿಕಾಯ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ನ್ಯಾಟೋ(ನಾರ್ತ್ ಅಂಟ್ಲಾಟಿಕ್ ಟ್ರೀಟಿ ಆರ್ಗನೈಶೇಷನ್) ಸಂಸ್ಥೆಯ ಪ್ರಮುಖ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ಟರ್ಕಿ ಮೇಲೆ ನಡೆದ ಇತ್ತೀಚಿನ ಭೀಕರ ದಾಳಿ ಇದಾಗಿದೆ.
ಟರ್ಕಿಯು ಜುಲೈ 15ರಂದು ಸೇನಾ ಕ್ಷಿಪ್ರ ಕ್ರಾಂತಿ ಮತ್ತು ಕುರ್ದಿಶ್ ಇಸ್ಲಾಂ ಉಗ್ರರ ಸರಣಿ ದಾಳಿಗಳಿಂದ ಜರ್ಝರಿತರಾಗಿರುವಾಗಲೇ ಇಂದು ಈ ವಿವಾಹ ಮಹೋತ್ಸವದ ವೇಳೆ ನಡೆದ ಭೀಕರ ದಾಳಿಗೆ ನಾಗರಿಕರು ತತ್ತರಿಸಿಹೋಗಿದ್ದಾರೆ.  ಈ ಭಯಾನಕ ಆಕ್ರಮಣವನ್ನು ಸಂಘಟಿಸಿದ ಮತ್ತು ಹಿಂಸಾಚಾರಕ್ಕೆ ಕಾರಣವಾದ ದೇಶದ್ರೋಹಿಗಳ ಕೃತ್ಯವನ್ನು ನಾವು ಖಂಡಿಸುತ್ತೇನೆ. ಈ ಕುಕೃತ್ಯ ಎಸಗಿದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಗೌರ್ನೀರ್ ಹೇಳಿದ್ದಾರೆ.

ಈ ಸ್ಪೋಟಕ್ಕೆ ಯಾರು ಕಾರಣ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮಾನವ ಬಾಂಬ್ ಮೂಲಕ ಘೋರ ಹಿಂಸಾಚಾರ ಎಸಗಲಾಗಿದೆ. ಈ ರೀತಿಯ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್(ಐಎಸ್) ಗುಂಪು ಅಥವಾ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಎಸಗುತ್ತದೆ. ಹೀಗಾಗಿ ಈ ಭಯೋತ್ಫಾದಕ ಸಂಘಟನೆಗಳೇ ದಾಳಿ ನಡೆಸಿರುವ ಶಂಕೆ ಇದೆ ಎಂದು ಗಜಿಯಾನ್ಟೆಪ್ನ ಆಡಳಿತಾರೂಢ ಜಸ್ಟಿಸ್ ಅಂಡ್ ಡೆವಲಪ್ಮೆಂಟ್ ಪಾರ್ಟಿ ನಾಯಕ ಮೆಹಮೆಟ್ ಎರ್ಡೊಗಾನ್ ತಿಳಿಸಿದ್ದಾರೆ.   ಗಾಜಿಯಾನ್ಟೆಪ್ನ ಸನಿನ್ಬೇ ಪ್ರದೇಶದಲ್ಲಿ ಈ ಸ್ಪೋಟ ಸಂಭವಿಸಿದ್ದು , ಕುರ್ದಿಶ್ ಜನರ ಪ್ರಾಬಲ್ಯವಿರುವ ಪ್ರದೇಶವಾಗಿದೆ. ಮದುವೆ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಕುರ್ದಿಶ್ ಜನರು ಸೇರಿದಾಗ ಈ ದಾಳಿ ನಡೆದಿದ್ದು , ಈ ಭಯೋತ್ಪಾದಕ ದಾಳಿಯ ಹಿಂದೆ ಐಎಸ್ಐಎಸ್ ಕೈವಾಡವಿರಬಹುದು ಎಂದು ನಂಬಲಾಗಿದೆ.
ಈ ಭೀಕರ ದಾಳಿ ನಡೆಸುವ ಮೂಲಕ ಜನರಲ್ಲಿ ಆತಂಕ ಉಂಟು ಮಾಡುವುದು ಭಯೋತ್ಪಾದಕರ ಉದ್ದೇಶವಾಗಿದೆ. ಆದರೆ ನಾವು ಇದಕ್ಕೆ ಜಗ್ಗುವುದಿಲ್ಲ ಎಂದು ಉಪಪ್ರಧಾನಮಂತ್ರಿ ಮೆಹಮೆಟ್ ಸಿಮ್ಸೆಕ್ ಹೇಳಿದ್ದಾರೆ.  ಈ ನಗರವು ಯುದ್ಧಪೀಡಿತ ಸಿರಿಯಾ ಗಡಿಯಿಂದ 60 ಕಿ.ಮೀ ದೂರದಲ್ಲಿದ್ದು, ಆ ದೇಶದಿಂದ ಪಲಾಯನ ಮಾಡಿರುವ ನಿರಾಶ್ರಿತ ಸಿರಿಯನ್ನರ ಆಶ್ರಯ ತಾಣವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin