ಸಿರಿಯಾ ರಾಜಧಾನಿ ಡಮಾಸ್ಕಸ್‍ನ ಮಿಲಿಟರಿ ಏರ್‍ಪೋರ್ಟ್ ಬಳಿ ರಾಕೆಟ್‍ಗಳ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Airport

ಬೈರುತ್, ಜ.13-ಸಿರಿಯಾ ಮತ್ತು ಇರಾಕ್ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಸಿರಿಯಾ ರಾಜಧಾನಿ ಡಮಾಸ್ಕಸ್‍ನ ಪೂರ್ವ ಭಾಗದ ಪ್ರಮುಖ ಸೇನಾ ವಿಮಾನನಿಲ್ದಾಣದ ಬಳಿ ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ. ಈ ಕೃತ್ಯದಿಂದ ಕೆರಳಿರುವ ಸಿರಿಯಾ ಯಾವುದೇ ಕಾರಣ ನೀಡದೇ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಮೂರನೇ ಬಾರಿ ಇಸ್ರೇಲ್ ಇಂಥ ಕೃತ್ಯಗಳನ್ನು ನಡೆಸಿದೆ ಎಂದು ಸಿರಿಯಾ ಆರೋಪಿಸಿದೆ.  ಇಸ್ರೇಲ್ ನಿನ್ನೆ ಮಧ್ಯರಾತ್ರಿ ನಂತರ ನಡೆಸಿದ ಹಲವು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಮೆಜ್ಹ್ ಮಿಲಿಟರಿ ಏರ್‍ಫೆÇೀರ್ಟ್ ಇರುವ ಟೈಬಿರಿಯಾ ನದಿ ಬಳಿ ರಾಕೆಟ್‍ಗಳು ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತು ಎಂದು ಸೇನೆ ನೀಡಿರುವ ಹೇಳಿಕೆಯನ್ನು ಸನಾ ಅಧಿಕೃತ ವಾರ್ತಾ ಸಂಸ್ಥೆ ಉಲ್ಲೇಖಿಸಿದೆ. ಆದರೆ ಈ ದಾಳಿಯಲ್ಲಿ ಸಾವು=ನೋವಿನ ವರದಿ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.

ರಾಜಧಾನಿಯಲ್ಲಿ ಹಲವಾರು ಸ್ಫೋಟಗಳ ಶಬ್ಧಗಳು ಕೇಳಿಬಂದವು ಎಂದು ಡಮಾಸ್ಕಸ್ ನಿವಾಸಿಗಳು ಹೇಳಿದ್ದಾರೆ. ರಾಜಧಾನಿ ಬಳಿ ಎಸ್‍ಐ ಉಗ್ರರ ಹಿಡಿತದಲ್ಲಿದ್ದ ಪ್ರದೇಶಗಳ ಮೇಲೆ ದಾಳಿ ನಡೆಸಲು ಹಿಂದೆ ಈ ವಿಮಾನನಿಲ್ಣಾಣವನ್ನು ಬಳಲಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin