ಸಿಲಿಂಡರ್ ಸ್ಫೋಟ : ಮಹಿಳೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

woman--suicide

ಚನ್ನಪಟ್ಟಣ, ಅ.5- ತಡರಾತ್ರಿ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಮೂವರು ಮಹಿಳೆಯರ ಪೈಕಿ ಒಬ್ಬರು ಸಾವನ್ನಪ್ಪಿರುವ ಘಟನೆ ಎಂಕೆ ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಸರೋಜಮ್ಮ (42) ಮೃತಪಟ್ಟ ಮಹಿಳೆ.ಗ್ರಾಮದ ಇಂದ್ರಮ್ಮ ಎಂಬುವರ ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿದ್ದ ಕಾರಣ ಪಕ್ಕದ ಮನೆಯ ಸರೋಜಮ್ಮ ಅವರ ಬಳಿ ಹೊಸ ಸಿಲಿಂಡರ್ ಫಿಕ್ಸ್ ಮಾಡಿಸಿಕೊಂಡಿದ್ದಾರೆ.

ಸರೋಜಮ್ಮ ಸಿಲಿಂಡರ್ ಫಿಕ್ಸ್ ಮಾಡಿ ಗ್ಯಾಸ್ ಆನ್ ಮಾಡಿದ್ದಾರೆ. ಈ ವೇಳೆ ಅನಿಲ ಸೋರಿಕೆಯಾಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ. ರಾತ್ರಿ ಈ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಇಂದ್ರಮ್ಮ ಮನೆಗೆ ಬಂದಿದ್ದ ಪಕ್ಕದ ಮನೆಯ ಸರೋಜಮ್ಮ, ಲಿಂಗಮ್ಮ ಮಾತನಾಡುತ್ತ ಕುಳಿತಿದ್ದರು.ಎಷ್ಟು ಹೊತ್ತಾದರೂ ಕರೆಂಟ್ ಬಾರದ ಕಾರಣ ಇಂದ್ರಮ್ಮ ಬೆಂಕಿ ಕಡ್ಡಿ ಗೀರಿಕೊಂಡೇ ಅಡುಗೆ ಮನೆ ಕಡೆ ದಾವಿಸುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮವಾಗಿ ಇಂದ್ರಮ್ಮ, ಸರೋಜಮ್ಮ, ಲಿಂಗಮ್ಮ ಗಂಭೀರ ಗಾಯಗೊಂಡರು. ತಕ್ಷಣ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಿಸದೆ ಸರೋಜಮ್ಮ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಎಂಕೆ ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin