ಸಿಲ್ವರ್ ಸಿಂಧುಗೆ ಅದ್ಧೂರಿ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Sindhu

ಹೈದರಾಬಾದ್ ಆ.21 : ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಪಿ.ವಿ. ಸಿಂಧು ಭಾರತಕ್ಕೆ ಆಗಮಿಸಿದ್ದಾರೆ.  ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಂಧು ಅವರಿಗೆ, ಅದ್ಧೂರಿ ಸ್ವಾಗತ ನೀಡಲಾಯಿತು. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ ಸಿಂಧು ಅವರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಮುಂಬೈ ಮೂಲದ ಖಾಸಗಿ ಬಸ್ ಸಂಸ್ಥೆ ಸಿಂಧು ಮೆರವಣಿಗೆಗೆ ಓಪನ್ ಬಸ್ ವ್ಯವಸ್ಥೆ ಮಾಡಿತ್ತು. ಮೆರವಣಿಗೆ ಮೂಲಕ ಅವರನ್ನು ಗಚ್ಚಿಬೌಲಿ ಮೈದಾನಕ್ಕೆ ಕರೆತರಲಾಗುವುದು.  ತೆಲಂಗಾಣ ಸರ್ಕಾರದ ವತಿಯಿಂದ ಅವರಿಗೆ ಗಚ್ಚಿಬೌಲಿ ಸ್ಟೇಡಿಯಂನಲ್ಲಿ ಅದ್ಧೂರಿ ಸನ್ಮಾನ ಮಾಡಲಾಗುವುದು.  ಸಿಂಧು ಅವರಿಗೆ 5 ಕೋಟಿ ರೂ. ಚೆಕ್, 5 ಎಕರೆ ಜಮೀನು ಹಾಗೂ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೋಚ್ ಗೋಪಿಚಂದ್ ಅವರಿಗೆ ಸನ್ಮಾನ ಮಾಡಲಾಗುವುದು.

updates awaiting…

Facebook Comments

Sri Raghav

Admin