ಸಿಲ್ವಾನ್‍ನಿಂದ ವೈರ್‍ಲೆಸ್ ಹೋಂ ಆಟೋಮೇಶನ್ ಉತ್ಪನ್ನಗಳು

ಈ ಸುದ್ದಿಯನ್ನು ಶೇರ್ ಮಾಡಿ

SILVAR

ಬೆಂಗಳೂರು, ಅ.20- ಸಿಲ್ವಾನ್ ಇದೀಗ ಹೊಸದಾಗಿ ಸುಧಾರಿತ ವೈರ್‍ಲೆಸ್ ಕಂಟ್ರೋಲ್ ಮಾಡ್ಯೂಲ್‍ಗಳಾದ ಸೈರಸ್, ಸೈರೆಲ್, ಸನ್ಸಾ ಮತ್ತು ಲ್ಯುಮೊಸ್ ಲೈಟ್‍ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಉತ್ಪನ್ನಗಳು ಮನೆಗಳನ್ನು ಮತ್ತಷ್ಟು ಅನುಕೂಲಕರ, ಭದ್ರತೆ ಮತ್ತು ಎಲೆಕ್ಟ್ರಿಕಲ್ ಫಿಟಿಂಗ್‍ಗಳನ್ನು ನಿರ್ವಹಣೆ ಮಾಡಲಿವೆ. ಭಾರತೀಯ ಮನೆಗಳಿಗೆ ಒಪ್ಪುವಂತಹ ಗ್ರಾಹಕಸ್ನೇಹಿ ಉತ್ಪನ್ನಗಳಾಗಿವೆ.ಸಿಲ್ವಾನ್‍ನ ಇತ್ತೀಚಿನ ಆವಿಷ್ಕಾರಕ ಸರಣಿಗಳು ಸಮಗ್ರವಾದ ಅಮೆಝಾನ್ ಎಕೋ ಧ್ವನಿ ಆಧಾರಿತ ಸೇವೆಯನ್ನು ನೀಡಲಿದೆ. ಅಲೆಕ್ಸಾ ಪದದ ಮೂಲಕ ಕಮಾಂಡ್ ಕೊಡುವುದರೊಂದಿಗೆ ಮನೆಯಲ್ಲಿ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಬಹುದಾಗಿದೆ. ದೆಹಲಿಯಲ್ಲಿ ವೃದ್ಧರ ಭದ್ರತೆ ಮತ್ತು ನೆರವಿಗಾಗಿ ಇರುವಸಮರ್ಥ್ ಸಂಸ್ಥೆಯೊಂದಿಗೆ ಸಿಲ್ವಾನ್ ಇನ್ನೋವೇಶನ್ ಲ್ಯಾಬ್ಸ್ ಸಹಯೋಗ ಹೊಂದಿದ್ದು, ಭದ್ರತಾ ಸೇವೆಗಳನ್ನು ಪೂರೈಸುತ್ತಿದೆ. ವೃದ್ಧರಿಗೆ ಹೈಟೆಕ್ ರಕ್ಷಣೆ ಮತ್ತು ಭದ್ರತೆ ಒದಗಿಸುವತ್ತ ಆಸ್ಥೆ ವಹಿಸಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin