ಸೀಮೆ ಹಸುಗಳ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

cows
ಚಿಂತಾಮಣಿ, ಏ.15- ತಾಲೂಕಿನ ಕೆಂದನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಡಾ.ಆರ್.ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್ ನಗರ ಶಾಖೆಯ ವತಿಯಿಂದ ಸಾಲದ ರೂಪದಲ್ಲಿ 10 ಜನ ಫಲಾನುಭವಿಗಳಿಗೆ ಸೀಮೆಹಸುಗಳನ್ನು ವಿತರಣೆ ಮಾಡಲಾಯಿತು.ಕೋಲಾರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಎಜಿಎಂ ಶ್ರೀನಿವಾಸ್‍ಮಹುಲಿ ಬ್ಯಾಂಕಿನಿಂದ ಸಿಗುವ ಸದುಪಯೋಗಪಡಿಸಿಕೊಳ್ಳ ಬೇಕೆ ಹೊರತು ದುರುಪ ಯೋಗಪಡಿಸಿಕೊಳ್ಮ್ಳದಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೋಲಾರ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ರಾದ ಹೊಸೂರು ವಾದಿರಾಜ್, ಚಿಂತಾಮಣಿ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕಿನ ಮುಖ್ಯವ್ಯವ ಸ್ಥಾಪಕ ಎ.ಎಂ.ಚಂದ್ರಶೇಖರ್, ಸಹಾಯಕ ವ್ಯವಸ್ಥಾಪಕ ಎನ್.ಪ್ರಕಾಶ್, ಎಂ.ವಂದನ, ಬಿ.ಸಿ.ರೆಡ್ಡಿಪದ್ಮ  ಯುನೈಟೆಡ್ ಇನ್ಸೂರೆನ್ಸ್ ಕಂಪನಿಯ ನಾಗಭೂಷನ್, ಕೆಂದನಹಳ್ಳಿ ಹಾ.ಉ.ಮ.ಸ. ಸಂಘದ ಅಧ್ಯಕ್ಷರಾದ ವೆಂಕಟಮ್ಮ, ಕಾರ್ಯದರ್ಶಿ ವೆಂಕಟಲಕ್ಷ್ಮಮ್ಮ, ಸಹಾ ಯಕಿ ಲಕ್ಷ್ಮೀದೇವಮ್ಮ, ಶೈಲಮ್ಮ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin