ಸೀರೆಯುಟ್ಟು ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರೀಸಿದ ಸಿಂಧು

ಈ ಸುದ್ದಿಯನ್ನು ಶೇರ್ ಮಾಡಿ

Sindhu

ಹೈದರಾಬಾದ್‌ ಆ.27 : ಸ್ಕರ್ಟ್‌ ಮೈದಾದನದಲ್ಲಿ ಪಾದರಸದಂತೆ ಓಡಾಡುವ ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಸಿಂಧು ಸಾಂಪ್ರಾದಾಯಿಕ ಸೀರೆಯುಟ್ಟು ಅಪ್ಪಟ ಭಾರತೀಯಳಾಗಿ ಎಲ್ಲರ ಗಮನ ಸೆಳೆದಳು.   ಶೆಟಲ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ತಾರೆ ಸಿಂಧು ಸೀರೆಯಲ್ಲಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹೈದರಾಬಾದ್‌ನ ಲಾಲ್‌ ದರ್ವಾಜ್‌ನಲ್ಲಿರುವ ಸಿಂಹವಾಹಿನಿ ಮಹಾಂಕಾಳಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಕಾಲ್ನಡಿಗೆಯಲ್ಲಿ ತೆರಳಿ ಹರಕೆ ತೀರಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧು, ಪ್ರತಿ ವರ್ಷ ಮಹಾಂಕಾಳಿ ದೇವತೆಯ ದರ್ಶನ ಪಡೆಯುತ್ತಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದರೆ ಮತ್ತೊಮ್ಮೆ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುತ್ತೇನೆಂದು ಹರಕೆ ಇಟ್ಕೊಂಡಿದ್ದೆ. ಅಂತೆಯೇ ದೇವತೆಗೆ ಹರಕೆ ತೀರಿಸಿದ್ದೇನೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin