ಸುಜನಾತ್ಮಕವಾಗಿ ಸಿನಿಮಾ ಬಳಸಿಕೊಂಡ ಕೀರ್ತಿ ಭಾರತದ್ದು

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru-5

ಚಿಕ್ಕಮಗಳೂರು, ಆ.19- ತಂತ್ರಜ್ಞಾನದ ಅವಿಷ್ಕಾರವಾದ ಸಿನಿಮಾವನ್ನು ಸೃಜನಾತ್ಮಕವಾಗಿ ಮೊದಲು ಬಳಸಿಕೊಂಡಿದ್ದು ಭಾರತ ಎಂದು ವಿಮರ್ಶಕ ಎನ್.ಎಸ್.ಶ್ರೀಧರಮೂರ್ತಿ ಹೇಳಿದರು.ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಕ್ತ ಸಂವಾದದಲ್ಲಿ ಕನ್ನಡ ಚಲನಚಿತ್ರ-ಧನಾತ್ಮಕ ಸಾಂಸ್ಕೃತಿಗಳು ಕುರಿತು ಮಾತನಾಡಿದರು.ಹಣ, ಗ್ಲಾಮರ್ ಜೊತೆಗೆ ಚಲನ ಚಿತ್ರಗಳಿಗೆ ಸಾಂಸ್ಕೃತಿಕ ಹಿನ್ನೆಲೆ ಇದೆ. ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ, ಸ್ತ್ರೀವಾದದ ಪ್ರತಿಪಾದನೆ, ಸಾಮಾಜಿಕ ಪಿಡುಗುಗಳ ನಿವಾರಣೆ ಜೊತೆಗೆ ಭಾಷೆ ಬೆಳವಣಿಗೆಯಲ್ಲಿಯೂ ಪ್ರಧಾನ ಮಾಧ್ಯಮವಾಗಿ ಬೆಳೆದಿದೆ ಎಂದು ವಿಶ್ಲೇಷಿಸಿದರು.

ಆರಂಭದಲ್ಲಿ ರಂಗಭೂಮಿ ಕಲಾವಿದರು ಸಿನಿಮಾವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರು ಎನ್ನುವುದು ಇತಿಹಾಸ. ಸಿನಿಮಾ ಕ್ರಮೇಣ ಸ್ವಾತಂತ್ರ್ಯ ಹೋರಾಟ ಕುರಿತ ಚಿತ್ರಗಳು ಬಂದವು. ವಸಂತಸೇನಾ ದಲ್ಲಿ ಕೈಲಾಸಂ ಬ್ರಿಟಿಷರ ವಿರುದ್ಧದ ನಿಲುವು ತಾಳಿದ್ದರು ಎಂದು ವಿವರಿಸಿದರು.  ನಿರ್ದೇಶಕರು ಕಥೆ ಹೇಳುವುದರಲ್ಲಿ ಸಂಯಮ-ಸಾಂಸ್ಕೃತಿಕ ಚೌಕಟ್ಟು ಎಂಬ ಶಿಸ್ತು ರೂಢಿಸಿಕೊಂಡಿದ್ದರು. ಟಿ.ವಿ.ಸಿಂಗ್ ಠಾಕೂರ್ ಅವರ ಚಂದ್ರವಳ್ಳಿಯ ತೋಟ ಭಾರತೀಯ ಚಿತ್ರರಂಗದ ಕ್ಲಾಸಿಕ್ ಎಂದು ಗುರುತಿಸಿಕೊಂಡಿತು. ರಾಜ್ಯದ 22 ಪ್ರಾಂತ್ಯಗಳಿಗೂ ಅರ್ಥವಾಗುವ ಕನ್ನಡ ಸಿನಿಮಾ ರೂಪಿಸಿತು ಎಂದು ತಿಳಿಸಿದರು.

ನಿರ್ದೇಶಕರ ಸಾಂಸ್ಕೃತಿಕ ಪರಿಭಾಷೆಗೆ ತಕ್ಕಂತೆ ರಾಜ್‍ಕುಮಾರ್ ಎಂಬಂತಹ ವರನಟ ಜನ್ಮತಾಳಿದ್ದು ಈ ನಾಡಿನ ಸುಕೃತ. ವೀರ ಪುರುಷರನ್ನು ಸಂತರು, ದಾಸರು, ಶರಣರನ್ನು ಕಾಲ ಸಮನ್ವಯಗೊಳಿಸಿದ್ದು ರಾಜ್‍ಕುಮಾರ್. ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಯಾರೂ ಹೋಲಿಕೆ ಇಲ್ಲ ಎಂದು ಬಣ್ಣಿಸಿದರು.ಯುರೇಕಾ ಅಕಾಡೆಮಿ ಪ್ರಾಚಾರ್ಯ ದೀಪಕ್ ದೊಡ್ಡಯ್ಯ ವಿಮರ್ಶಕ ಎನ್.ಎಸ್.ಶ್ರೀಧರಮೂರ್ತಿ ಅವರನ್ನು ಸನ್ಮಾನಿಸಿದರು. ಪ್ರಮುಖರಾದ ಚೂಡನಾಥ ಅಯ್ಯರ್, ಪ್ರಕಾಶ್ ಶಿರಸಿ, ಅನಂತರಾಮಯ್ಯ, ನರಹರಿ ಹೆಗ್ಡೆ, ಗಿರಿಜಾಶಂಕರ್, ವೈಷ್ಣವಿ ಎನ್.ರಾವ್, ಮೇಕನಗದ್ದೆ ಲಕ್ಷ್ಮಣಗೌಡ, ಹುಲಿಕೆರೆ ಪುಲಿಕೇಶಿ, ರೇಖಾ ನಾಗರಾಜ್‍ರಾವ್, ಸುಮಾ ಪ್ರಸಾದ್, ರೇಖಾ ಪ್ರೇಂಕುಮಾರ್ ಮತ್ತಿತರರು ಸಂವಾದ ನಡೆಸಿಕೊಟ್ಟರು. ಉಪನ್ಯಾಸಕ ನಾಗರಾಜರಾವ್ ಕಲ್ಕಟ್ಟೆ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin