ಸುಟ್ಟು ಕರಕಲಾದ KSRTC ಬಸ್ : ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

bus

ಕನಕಪುರ, ನ.23- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದರ ಇಂಜಿನ್‍ನಲ್ಲಿ ಆಕಸ್ಮಿಕವಾಗಿ ಉಂಟಾದ ಬೆಂಕಿಯಿಂದಾಗಿ ಇಡೀ ಸಾರಿಗೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ತಮಿಳುನಾಡು ಗಡಿಪ್ರದೇಶ ಕೊಳಗೊಂಡನಹಳ್ಳಿ ಸಮೀಪದ ಚಾಮುಂಡಿಪುರ ಗೇಟ್ ಬಳಿ ಸಂಭವಿಸಿದೆ.ಕನಕಪುರದಿಂದ ಹುಣಸನಹಳ್ಳಿ ಮಾರ್ಗವಾಗಿ ಕೊಳಗೊಂಡನಹಳ್ಳಿಗೆ ಹೋಗಬೇಕಾಗಿದ್ದ ಸಾರಿಗೆ ಬಸ್ಸೊಂದು ನಿನ್ನೆ ಚಾಮುಂಡಿಪುರ ಗೇಟ್‍ಬಳಿ ತೆರಳುತ್ತಿದ್ದಾಗ ಇಂಜಿನ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬೆಂಕಿಗೆ ಆಹುತಿಯಾಗಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು, ಚಾಲಕ ಮತ್ತು ನಿರ್ವಾಹಕರು ತಕ್ಷಣ ಬಸ್‍ನಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುದ್ದಿ ತಿಳಿದ ಕೋಡಿಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಎಸ್‍ಐ ದೀಪಕ್, ಎಎಸ್‍ಐ ಗಣೇಶ್ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin