ಸುತ್ತೂರು ಶ್ರೀಮಠದಲ್ಲಿ ಬಾಬಾ ರಾಮ್‍ದೇವ್ ಹುಟ್ಟುಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

BabA-Ramdev01

ನಂಜನಗೂಡು, ಡಿ.26- ದಾನದಿಂದ ಪುಣ್ಯ, ವಿದ್ಯಾದಾನದಿಂದ ಮಹಾಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟರು. ಕಳೆದ ಮೂರು ದಿನಗಳಿಂದ ಭಾರತದ ದಕ್ಷಿಣ ರಾಜ್ಯಗಳ ಸಮಿತಿಯ ಸದಸ್ಯರು ಇದೇ ಮೊದಲ ಬಾರಿಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿಸಿರುವ ಯೋಗ ಶಿಬಿರದ ಸಂದರ್ಭದಲ್ಲಿ ಶ್ರೀ ಸುತ್ತೂರು ಶ್ರೀಮಠದ ವತಿಯಿಂದ ಬಾಬಾ ರಾಮ್‍ದೇವ್ ಅವರ ಹುಟ್ಟುಹಬ್ಬ ಆಚರಿಸಿದ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿರುವ ಶ್ರೀಮಠ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಸಂಸ್ಕಾರಯುಕ್ತ ಶಿಕ್ಷಣವನ್ನು ನೀಡುತ್ತಿದೆ ಎಂದು ಅಭಿನಂದಿಸಿದರು. ಸುತ್ತೂರು ಶಾಲೆಯ ಮಲ್ಲಕಂಬದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಆಶೀರ್ವದಿಸಿದರು. ಇಂತಹ ಮಹತ್ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಪತಂಜಲಿ ಯೋಗ ಪೀಠವು ಇಲ್ಲಿ ದಕ್ಷಿಣ ರಾಜ್ಯಗಳ ಸರ್ವಸದಸ್ಯರ ಸಭೆ ನಡೆಸುತ್ತಿರುವುದು ಮಹಾಯೋಗವಾಗಿದೆ ಎಂದು ಹೇಳಿದರು.

ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶ್ರೀಗದ್ದುಗೆಯಿಂದ ಮಂಗಳವಾದ್ಯ ಹಾಗೂ ವಿವಿಧ ಕಲಾತಂಡಗಳೊಂದಿಗೆ ಆಕರ್ಷಕ ರಥದಲ್ಲಿ ಮೆರವಣಿಗೆ ಮೂಲಕ ಬಾಬಾ ರಾಮ್‍ದೇವ್‍ರವರನ್ನು ಶಾಲಾ ಆವರಣಕ್ಕೆ ಬರ ಮಾಡಿಕೊಳ್ಳಲಾಯಿತು. ಸಮಾರಂಭದ ಸಾನ್ನಿದ್ಯವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆಯಲ್ಲಿ ಸಂಸದ ಭಗವಂತ್ ಖೂಬಾ, ಪ್ಯಾಬ್ರಿಕಾನ್ ಮಂಜುನಾಥ್, ಜಯದೀಪ್ ಆರ್ಯ, ಸೋದರಿ ಸುಮನ್‍ಜಿ, ರಾಕೇಶ್‍ಜಿ, ರಾಜ್ಯ ಪ್ರಭಾರಿಯಾದ ಶ್ರೀ ಭವರ್‍ಲಾಲ್ ಆರ್ಯ ಮೊದಲಾದವರಿದ್ದರು.

Facebook Comments

Sri Raghav

Admin