ಸುದೀಪ್-ಪ್ರಿಯಾ ದಾಂಪತ್ಯ ಕಲಹ ಸುಖಾಂತ್ಯ, ವಿಚ್ಚೇದನ ಅರ್ಜಿ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

Appa--01

ಬೆಂಗಳೂರು, ಆ.24- ಖ್ಯಾತ ಚಲನಚಿತ್ರ ನಟ ಸುದೀಪ್ ಮತ್ತು ಪ್ರಿಯಾ ಅವರ ದಾಂಪತ್ಯದ ನಡುವಿನ ಕಲಹ ಸುಖಾಂತ್ಯ ಕಂಡಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪರಸ್ಪರ ಇಬ್ಬರು ದೂರವಾಗಲು ಬಯಸಿ ವಿಚ್ಚೇದನಕ್ಕಾಗಿ ಕಳೆದ ಎರಡು ವರ್ಷಗಳ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಾಪಸ್ ಪಡೆಯುವ ಮೂಲಕ ಮತ್ತೆ ಸತಿ-ಪತಿಗಳು ಒಂದಾಗಿದ್ದಾರೆ. ಇದಕ್ಕೆ ತಮ್ಮ ಮುದ್ದಿನ ಮಗಳು ಕಾರಣವಾಗಿದ್ದಾಳೆ.

ತಮ್ಮ ಮಗಳ ಮುಂದಿನ ಭವಿಷ್ಯದ ಹಿನ್ನೆಲೆಯಲ್ಲಿ ವಿಚ್ಚೇದನದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯದಿಂದ ವಾಪಸ್ ಪಡೆಯುವುದಾಗಿ ಸುದೀಪ್ ಅವರ ವಕೀಲರು ತಿಳಿಸಿದ್ದಾರೆ. ಈ ಮೂಲಕ ಎರಡು ವರ್ಷಗಳಿಂದ ಇವರ ಸಂಸಾರದಲ್ಲಿದ್ದ ಕಂದಕ ಕೊನೆಗೊಂಡಿದೆ. 2015ರಲ್ಲಿ ವಿಚ್ಚೇದನ ಕೋರಿ ಸುದೀಪ್ ಅವರು ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆ ನಡೆದಿತ್ತು. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ 9 ಬಾರಿ ನೋಟಿಸ್ ನೀಡಿದ್ದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಕಳೆದ ವರ್ಷದಲ್ಲಿಯೇ ಈ ಇಬ್ಬರು ಪರಸ್ಪರ ಸಹಮತಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ವಿಚ್ಚೇದನ ಅರ್ಜಿಯನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ.

Facebook Comments

Sri Raghav

Admin