ಸುನಿ ಮೊಬೈಲ್‍ ನಲ್ಲಿವೆಯಂತೆ ನಟಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ದೃಶ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Pulsor-Suni

ಎರ್ನಾಕುಲಂ, ಫೆ. 25-ದಕ್ಷಿಣ ಭಾರತದ ಖ್ಯಾತ ನಟಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಸೂತ್ರಧಾರ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿಗೆ ಸೇರಿದ ಮೊಬೈಲ್ ಫೋನ್ ಪತ್ತೆ ಕಾರ್ಯ ಈಗ ಕೇರಳ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ನಟಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಸುನಿ ತನ್ನ ಮೊಬೈಲ್‍ನಲ್ಲಿ ಚಿತ್ರಿಸಿಕೊಂಡಿದ್ದ ಆರೋಪಿ, ಅದನ್ನು ಬಳಸಿಕೊಂಡು ಸಂಚು ರೂಪಿಸಿದ್ದ ಎನ್ನಲಾಗಿದೆ. ಈಗ ಆ ಫೋನ್‍ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.  ಮೊಬೈಲ್ ಫೋನ್‍ನನ್ನು ತಾನು ಮೋರಿಯೊಂದರಲ್ಲಿ ಎಸೆದಿರುವುದಾಗಿ ಆರೋಪಿಯು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ನಟಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಮಾರ್ಗದಲ್ಲೇ ಆತನನ್ನು ನಿನ್ನೆ ಕರೆದೊಯ್ಡ ಪೊಲೀಸರು ಮಾಹಿತಿ, ಸಾಕ್ಷ್ಯಗಳನ್ನು ಸಂಗ್ರಹಿಸಿ, ಫೋನ್‍ಗಾಗಿ ಶೋಧ ನಡೆಸಿದರು. ಆದರೆ ಫೋನ್ ಪತ್ತೆಯಾಗಿಲ್ಲ.

ಸುನಿ ಇದೇ ರೀತಿ ಇನ್ನೂ ಕೆಲವು ನಟಿಯರಿಗೆ ಬ್ಲಾಕ್‍ಮೇಲ್ ಮಾಡಿರುವ ಸಾಧ್ಯತೆ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ಆ ನಿಟ್ಟಿನಲ್ಲೂ ತನಿಖೆ ತೀವ್ರಗೊಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin