ಸುಪ್ರೀಂಕೋರ್ಟ್ ಆದೇಶ ವಿರೋಧಿಸಿ : ಮೌನ ಮೆರವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

madhur--yogesh

ಚನ್ನಪಟ್ಟಣ, ಸೆ.22- ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದನ್ನು ವಿರೋಧಿಸಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ಗಾಂಧೀಭವನದ ಮುಂದೆ ಮೌನ ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ವಿವಿಧ ಕನ್ನಡಪರ, ಜನಪರ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿ ದಿನವಿಡೀ ಪ್ರತಿಭಟನೆ ನಡೆಸಿದವು. ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಪದೇ ಪದೇ ರಾಜ್ಯದ ವಿರುದ್ದ ವ್ಯತಿರಿಕ್ತ ತೀರ್ಪು ನೀಡುತ್ತಿರುವುದನ್ನು ಸಂದರ್ಭದಲ್ಲಿ ಖಂಡಿಸಲಾಯಿತು.

ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಪಿ.ಯೋಗೇಶ್ವರ್, ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯ ಕಾವೇರಿ ಮೇಲಿನ ಅಧಿಕಾರವನ್ನು ಕಳೆದುಕೊಳ್ಳಲಿದೆ. ಇದರಿಂದ ರಾಜ್ಯಕ್ಕೆ ಮಾರಕವಾಗುವುದು ನಿಶ್ಚಿತ. ಹಾಗಾಗಿ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು. ಮೌನ ಪ್ರತಿಭಟನೆಯನ್ನು ನಿರಂತರವಾಗಿ ನ್ಯಾಯ ಸಿಗುವವರೆಗೂ ನಡೆಸಲು ತೀರ್ಮಾನಿಸಲಾಯಿತು. ಪ್ರತಿದಿನ ಒಂದೊಂದು ಜಿಪಂ ವ್ಯಾಪ್ತಿಯ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕು ಯಾವುದೇ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡದಂತೆ ನಿರ್ಧರಿಸಲಾಯಿತು.

ನಿಷೇದಾಜ್ಞೆ  ಉಲ್ಲಂಘನೆ:
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ 144 ಸೆಕ್ಷನ್ ಹೇರಿಕೆ ಮಾಡಿ, ನಿಷೇದಾಜ್ಞೆ  ಜಾರಿಗೊಳಿಸಿದ್ದರೂ ಪ್ರತಿಭಟನೆ ಸಾಂಗವಾಗಿ ನೆರವೇರಿತು. ಐದಕ್ಕಿಂತ ಹೆಚ್ಚಿನ ಮಂದಿ ಗುಂಪುಗೂಡುವುದಕ್ಕೇ ಅವಕಾಶ ಇಲ್ಲದಿದ್ದರೂ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೂ.ಜಿಪಂ ಅಧ್ಯಕ್ಷ ಸಿ.ಪಿ.ರಾಜೇಶ್, ಸದಸ್ಯ ಪ್ರಸನ್ನಕುಮಾರ್, ತಾಪಂ ಅಧ್ಯಕ್ಷ ರಾಜಣ್ಣ, ರೈತಸಂಘದ ಸಿ.ಪುಟ್ಟಸ್ವಾಮಿ, ಎಂ.ರಾಮು, ಮಲ್ಲಯ್ಯ, ಕರವೇ ಸಾಗರ್, ಬೊಂಬೆನಾಡು ಹಿತರಕ್ಷಣಾ ವೇದಿಕೆಯ ಶಿವು, ಅಭಿಲಾಷ್‍ಗೌಡ, ಬ್ರಹ್ಮಣೀಪುರ ಪ್ರಸನ್ನ, ನಗರಸಭೆ ಸದಸ್ಯರಾದ ರಾಮು, ಮುದ್ದುಕೃಷ್ಣ, ಮುಖಂಡ ಎಸ್.ಸಿ.ಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin