ಸುಪ್ರೀಂಕೋರ್ಟ್ ಛೀಮಾರಿಗೆ ಎಚ್ಚೆತ್ತ ಕೇಂದ್ರ ಸರ್ಕಾರ : ಜಡ್ಜ್’ಗಳ ನೇಮಕ ಪ್ರಕ್ರಿಯೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched

ನವದೆಹಲಿ, ನ.1- ಹೈಕೋರ್ಟ್‍ಗಳಲ್ಲಿ ನ್ಯಾಯಾಧೀಶರ ನೇಮಕಾತಿ ವಿಳಂಬಕ್ಕಾಗಿ ಸುಪ್ರೀಂಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದ್ದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ದೆಹಲಿ ಮತ್ತು ಗುವಾಹತಿ ಉಚ್ಚ ನ್ಯಾಯಾಲಯಗಳಿಗೆ 10 ನ್ಯಾಯಮೂರ್ತಿಗಳ ನೇಮಕಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹೆಸರುಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅನುಮೋದನೆಗಾಗಿ ರವಾನಿಸಲಾಗಿದೆ.  ಕರ್ನಾಟಕ. ಅಲಹಾಬಾದ್ ಸೇರಿದಂತೆ ವಿವಿಧ ರಾಜ್ಯಗಳ ಹೈಕೋರ್ಟ್‍ಗಳಲ್ಲಿ ಖಾಲಿ ಇರುವ 35ಕ್ಕೂ ಹೆಚ್ಚು ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಸಹ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರವು, ಸದ್ಯದಲ್ಲೇ ಈ ಪಟ್ಟಿಯನ್ನು ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಲಿದೆ.

ದೆಹಲಿ ಮತ್ತು ಗುವಾಹತಿ ಹೈಕೋರ್ಟ್‍ಗಳಲ್ಲಿ ನೇಮಕಾತಿಗಾಗಿ ತಲಾ ಐವರು ನ್ಯಾಯಾಧೀಶರ ಹೆಸರುಗಳನ್ನು ಸೂಚಿಸಿ ಪಟ್ಟಿಯನ್ನು ರವಾನಿಸಲಾಗಿದೆ. ರಾಷ್ಟ್ರಪತಿಯವರು ಒಪ್ಪಿಗೆ ನೀಡಿದ ಬಳಿಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.  ಕೊಲಿಜಿಯಂ (ನ್ಯಾಯಾಧೀಶರುಗಳ ನೇಮಕ ಮಂಡಳಿ) ಶಿಫಾರಸು ಮಾಡಿದ್ದರೂ ಕೋರ್ಟ್‍ಗಳಲ್ಲಿ ನ್ಯಾಯಾಧೀಶರ ನೇಮಕಾತಿಗೆ ವಿಳಂಬ ನೀತಿ ಅನುಸರಿಸುತ್ತಿದ್ದ ಕೇಂದ್ರ ಸರ್ಕಾರದ ಧೋರಣೆಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಟೀಕಿಸಿತ್ತು. ನ್ಯಾಯಾಧೀಶರುಗಳು ಇಲ್ಲದಿರುವುದರಿಂದ ಕೋರ್ಟ್‍ಗಳಿಗೆ ಬೀಗ ಹಾಕುತ್ತೀರಾ ಎಂದು ಕರ್ನಾಟಕ ಹೈಕೋರ್ಟ್ ಪರಿಸ್ಥಿತಿಯನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin