ಸುಪ್ರೀಂ ತೀರ್ಪು ಏಕಪಕ್ಷೀಯ : ಎಂ.ಸಿ.ಅಶ್ವಥ್

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched
ಚನ್ನಪಟ್ಟಣ, ಸೆ.22- ರಾಜ್ಯದ ಸಂಕಷ್ಟ ಪರಿಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳದೆ ಸುಪ್ರೀಂಕೋರ್ಟ್ ಪದೇ ಪದೇ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಖಂಡನೀಯ ಎಂದ ಮಾಜಿ ಶಾಸಕ ಎಂ.ಸಿ.ಅಶ್ವಥ್ ತಿಳಿಸಿದ್ದಾರೆ.ಈ ತೀರ್ಮಾನ ಮೇಲ್ನೋಟಕ್ಕೆ ಏಕಪಕ್ಷೀಯ ತೀರ್ಮಾನದಂತೆ ಕಂಡು ಬರುತ್ತಿದ್ದು, ವಾಸ್ತವಾಂಶಗಳನ್ನು ಪರಿಗಣಿಸದೇ ಎರಡೂ ರಾಜ್ಯಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟು ತೀರ್ಪು ನೀಡಬೇಕಾದ ನ್ಯಾಯಾಂಗ ವ್ಯವಸ್ಥೆ ಕೇವಲ ಒಂದು ರಾಜ್ಯದ ಪರವಾಗಿಯೇ ತೀರ್ಪು ನೀಡಿ ರಾಜ್ಯದ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಕೂಡ ಪದೇ ಪದೇ ರಾಜ್ಯದ ಕಡೆಗೆ ಛಾಟಿ ಬೀಸುತ್ತಿರುವುದು ದುರ್ಧೈವದ ಸಂಗತಿ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ಇಲ್ಲಿನ ಜನತೆ ಹೋರಾಟಕ್ಕೆ ದಾರಿ ಮಾಡಿಕೊಡುವ ಬದಲು ಈ ಕೂಡಲೇ ಎಚ್ಚೆತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ಮಾಡಲು ಬದಲು ಹಿಂದಿನಿಂದಲೂ ಹೇಳುತ್ತಾ ಬಂದಿರುವ ಗಂಗಾ-ಕಾವೇರಿ ನದಿ ಜೋಡಣೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೆತ್ತಿಕೊಂಡು ಶೀಘ್ರ  ಪೂರ್ಣಗೊಳಿಸಿದಾಗ ಮಾತ್ರ ರೈತಾಪಿ ವರ್ಗಕ್ಕೆ ಮತ್ತು ಸಾರ್ವಜನಿಕ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಇರುವ ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

 

► Follow us on –  Facebook / Twitter  / Google+

Facebook Comments

Sri Raghav

Admin