ಸುಪ್ರೀಂ ತೀರ್ಪು ಖಂಡಿಸಿ ಕನ್ನಡ ರಕ್ಷಣಾ ವೇದಿಕೆ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

anekal--kaveri--water

ಆನೇಕಲ್, ಸೆ.6- ತಮಿಳು ನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಕೋರ್ಟ್ ನೀಡಿರುವ ತೀರ್ಪನ್ನು ಧಿಕ್ಕರಿಸಿ ಕನ್ನಡ ರಕ್ಷಣಾ ವೇದಿಕೆ (ಪ್ರವೀಣ್‍ಕುಮಾರ್‍ಶೆಟ್ಟಿ) ಬಣದ ಕಾರ್ಯಕರ್ತರು ತಾಲ್ಲೂಕಿನ ಜಿಗಣಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  ಕರವೇ ರಾಜ್ಯ ಉಪಾಧ್ಯಕ್ಷ ಜಿಗಣಿ ಪುನೀತ್ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಜ್ಯಕ್ಕೆ ಮರಣ ಶಾಸನವಾಗಿದೆ ಎಂದು ಆಕ್ರೋಶವ್ಯಕ್ತ ಪಡಿಸಿದರು.

ರಾಜ್ಯದಲ್ಲಿ ರಾಜಕೀಯ ಸಂಘರ್ಷವಾದರೂ ಸಹ ಬೆಂಗಳೂರಿನ ಹಾಗೂ ಮಂಡ್ಯದ ಭಾಗದ ಜನತೆ ಹಿತದೃಷ್ಠಿಯನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತಮಿಳುನಾಡಿಗೆ ಒಂದು ಒಂದು ಹನಿ ನೀರು ಬಿಡಬಾರದು ಎಂದರು. ಕೂಡಲೇ ರಾಜ್ಯಸರ್ಕಾರ ಮೇಲ್‍ಮನವಿ ಸಲ್ಲಿಸಿ ಮರು ಪರಿಶೀಲನೆ ಮಾಡಿ ಸರಿಯಾದ ನ್ಯಾಯ ಮಂಡನೆಗೆ ಮನವಿ ಮಾಡಬೇಕು ಎಂದರು.ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಮಿಳುನಾಡಿನ ಚಾನೆಲ್‍ಗಳು ಬಂದ್ ಮಾಡಲಾಗುವುದು ಹಾಗೂ ತಮಿಳುನಾಡಿನ ವಾಹನಗಳನ್ನು ರಾಜ್ಯದಲ್ಲಿ ಪ್ರವೇಶಮಾಡಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‍ನ ತಾಲ್ಲೂಕು ಅಧ್ಯಕ್ಷ ನಾಗಲೇಖ ಮಾತನಾಡಿ, ಸುಪ್ರೀಂ ಕೋರ್ಟ್ ಪದೇ ಪದೇ ತಮಿಳರ ಪರವಾಗಿ ತೀರ್ಪು ನೀಡುವುದನ್ನು ಬಿಟ್ಟು ರಾಜ್ಯದ ಹಿತಾಸಕ್ತಿಯನ್ನು ಕಾಯಬೇಕು ಎಂದರು. ಜೊತೆಗೆ ರಾಜ್ಯದ ಎಲ್ಲಾ ಸಂಸದರು ಹಾಗೂ ಶಾಸಕರು ಸುಪ್ರೀಂ ಕೋರ್ಟ್ ವಿಚಾರದಲ್ಲಿ ಪಕ್ಷಾತೀತಾವಾಗಿ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ತಿಳಿಸಿದರು.ಕರವೇ ಮುಖಂಡರಾದ ಕಬ್ಬಡ್ಡಿ ಮಂಜು, ಸೊಪ್ಪಹಳ್ಳಿ ಸತೀಶ್, ಜೀವನ್ ಶೆಟ್ಟಿ, ಗಿರೀಶ್, ನಾಗರಾಜ್, ಮಂಜುನಾಥ್ ಮತ್ತಿತರು ಹಾಜರಿದ್ದರು.

 

 

► Follow us on –  Facebook / Twitter  / Google+

 

 

Facebook Comments

Sri Raghav

Admin